ಜಿಲ್ಲೆ

ಪುತ್ತೂರಿನಲ್ಲಿ ಅಪಾರ ಮಾದಕವಸ್ತು ವಶ ?

Mangaluru - Nishantha Narayana

ಪುತ್ತೂರು: ಕಬಕ ಪದ್ನಡ್ಕದ ಕಲ್ಲಂದಡ್ಕ ಕೆಲವು ವರ್ಷಗಳಿಂದ ಮನೆಯೊಂದರಲ್ಲಿ ನಿರಂತರವಾಗಿ ಮಾದಕ ವಸ್ತುಗಳ ವಿತರಣೆ ನಡೆಯುತ್ತಿದ್ದು, ಬುಧವಾರ ಸಾಯಂಕಾಲ ಒಂದು ಕಾರು ಹಾಗೂ ಸ್ಥಳದಲ್ಲಿ ಸಿಕ್ಕಿದ ಭಾರಿ ಪ್ರಮಾಣದ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ ಎಂಬ ಸುದ್ದಿಯೊಂದು ಹರಡಿದೆ. ಆದರೆ ಪೊಲೀಸರು ಈ ಸುದ್ದಿಯನ್ನು ದೃಢಪಡಿಸಿಲ್ಲ.

ಹೊರರಾಜ್ಯ ನೋಂದಣಿಯ ಕಾರೊಂದನ್ನು ವಶಕ್ಕೆ ಪಡೆದುಕೊಳ್ಳುವ ಜತೆಗೆ ೧೦ ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದುಕೊಂಡ ವಿಡಿಯೋ ಚಿತ್ರೀಕರಣ ಸ್ಥಳೀಯರಲ್ಲಿದೆ ಎಂದು ಹೇಳಲಾಗುತ್ತಿದೆ. ಮಫ್ತಿಯಲ್ಲಿ ಪೊಲೀಸರು ಬಂದಿದ್ದಾರಾ ಅಥವಾ ಪೊಲೀಸರ ಹೆಸರಿನಲ್ಲಿ ನಕಲಿಗಳು ಬಂದು ದಂಧೆಕೋರರಿಂದ ಹಣ ವಸೂಲಿಗೆ ಪ್ರಯತ್ನ ನಡೆದಿರುವುದಾ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.

ಅನಾಮಿಕ ವಾಹನಗಳು ಹಾಗೂ ಜನರು ಓಡಾಡುತ್ತಿರುವ ಕುರಿತು ಹಲವು ಸಮಯದಿಂದ ಇಲಾಖೆಯ ಅಽಕಾರಿಗಳಿಗೆ ದೂರು ನೀಡಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗದೆ ಎಗ್ಗಿಲ್ಲದೆ ದಂಧೆ ನಡೆಯುತ್ತಲೇ ಬಂದಿದೆ. ವಾರದಿಂದ ಕಡಿಮೆಯಿದ್ದ ವಾಹನಗಳ ಓಡಾಟ ಎರಡು ದಿನದಿಂದ ಹೆಚ್ಚಾಗಿರುವ ಬೆನ್ನಲ್ಲೇ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.