ಜಿಲ್ಲೆ

ಮಾದಕ ವಸ್ತು ಸೇವನೆ ಇಬ್ಬರ ಬಂಧನ

reportermng

ಮಂಗಳೂರು: ನಗರದ ದೇರೆಬೈಲ್ ಮಾಲೇಮಾರ್‌ನ ಅಪಾರ್ಟ್‌ಮೆಂಟ್ ಹೊರಗಡೆ ರಸ್ತೆೆಬದಿಯಲ್ಲಿ ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಅಕ್ಷಯ್(27) ಮತ್ತು ಸೂರ್ಯದೇವ್(30) ಎಂಬವರನ್ನು ಕಾವೂರು ಪೊಲೀಸರು ಮಂಗಳವಾರ ಮಧ್ಯಾಾಹ್ನ ಬಂಧಿಸಿದ್ದಾರೆ.


ಆರೋಪಿಗಳು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.