ಜಿಲ್ಲೆ

ಮಾದಕ ವಸ್ತು ಕಳ್ಳ ಸಾಗಣೆ ಬಹುದೊಡ್ಡ ಅಪರಾಧ

ಉತ್ತರ ಕನ್ನಡ ಡೆಸ್ಕ್

ರೋಣ: ಮಾದಕ ದ್ರವ್ಯಗಳ ಸೇವನೆ ಮತ್ತು ಕಳ್ಳ ಸಾಗಣೆ ಬಹುದೊಡ್ಡ ಅಪರಾಧವಾಗಿದೆ. ಇದು ವ್ಯಕ್ತಿಯಷ್ಟೇ ಅಲ್ಲದೆ ಅವರ ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ರೋಣ ಪೊಲೀಸ್ ಠಾಣೆ ಸಿಬ್ಬಂದಿ ಆನಂದ ಮೇಟಿ ಹೇಳಿದರು.

ತಾಲೂಕಿನ ಬೆಳವಣಕಿ ಹಾಗೂ ಯಾವಗಲ್ ಗ್ರಾಮದಲ್ಲಿ ರೋಣ ಪೊಲೀಸ್ ಠಾಣೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ವಣಕ್ಕೆ ಕೈಜೋಡಿಸಬೇಕು. ನಮ್ಮ ಕುಟುಂಬಕ್ಕೆ ನಾವೇ ಆಧಾರವಾಗಿದ್ದು, ನಮ್ಮ ಬಗ್ಗೆ ಹೆತ್ತವರು ಬಹಳಷ್ಟು ಕನಸು ಇಟ್ಟಿಕೊಂಡಿದ್ದಾರೆ. ಅವರ ಕನಸನ್ನು ಹಾಳು ಮಾಡುವುದು ಬೇಡ ಎಂದರು.

ಬೆಳವಣಕಿ ಬಸ್ ನಿಲ್ದಾಣದ ಹತ್ತಿರ ಮಾದಕ ದ್ರವ್ಯ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಯಾವಗಲ್ ಗ್ರಾಮದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಶೈಲಿ ಆಯ್ಕೆ ಮಾಡುವಂತೆ ಹಾಗೂ ಮಾದಕ ವಸ್ತು ಸೇವನೆಯಿಂದ ದೂರವಿರುವಂತೆ ಅರಿವು ಮೂಡಿಸಲಾಯಿತು.

ಹೇಮಣ್ಣ ಅಳಗವಾಡಿ, ಅಲ್ಲಾಸಾಹೇಬ, ಮಾರುತಿ ಕಮ್ಮಾರ, ನಾಗಪ್ಪ ಮಾದರ, ಶರಣಪ್ಪ ವಡ್ಡಟ್ಟಿ, ರಾಜೇಸಾಬ್ ನದಾಫ್, ಹುಸೇನಸಾಬ್ ಕುರ್ಲಗೇರಿ, ಶರಣಪ್ಪ ದಾನಿ, ಮುತ್ತು ನಂದಿಕೋಲ, ಫರಿದಸಾಬ್ ಅತ್ತಾರ, ಗುರುರಾಜ ಶೆಟ್ಟರ, ಮಾರುತಿ ಸಣಕಲ್ ಇದ್ದರು.