ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಕ್ರಮವಾಗಿ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕಲಬುರಗಿ ನ Iಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನ ಇಂದು ಬೆಳಗಿನ ಜಾವ ಸಂಭವಿಸಿದೆ. ಇದರಿಂದಾಗಿ ಕಲಬುರಗಿಯಲ್ಲಿ ಮತ್ತೇ ಗುಂಡಿನ ಸದ್ದು ಅಬ್ಬರಿಸಿದೆ.
ಸುಪ್ರೀತ್ ನವಲೇ (32) ಎಂಬಾತನೇ ಫೈರಿಂಗ್ ನಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ಡ್ರಗ್ ಸ್ಮಗಲರ್. ಮಕ್ತಂಪುರ ನಿವಾಸಿ
ಅಕ್ರಮವಾಗಿ ಮಾದಕ ವಸ್ತು ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿಯಂತೆಕ ಕಲಬುರಗಿ ಹೊರ ವಲಯದ ತಾವರಗೇರಾ ಬಳಿ ಪೊಲೀಸರು ಕಾವಲಿಗಿದ್ದರು.
ವಾಹನಗಳ ತಪಾಸಣೆ ಮಾಡುತ್ತಿದ್ದರು, ಈ ವೇಳೆಯಲ್ಲಿ ಕಾರಿನಲ್ಲಿ ಬಂದ ಸುಪ್ರೀತ್ ಗೆ ಕಾರ್ ತಪಾಸಣೆ ಮಾಡಲು ಪೊಲೀಸರು ಮುಂದಾದ ವೇಳೆಯಲ್ಲಿ ಅವರ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ ಆಗ ಪೊಲೀಸರು ಆತ್ಮರಕ್ಷಣೆಗಾಗಿ ಫೈರ್ ಮಾಡಿದಾಗ ಸುಪ್ರೀತ್ ಎಡಗಾಲಿಗೆ ಗುಂಡು ಹೊಕ್ಕಿದೆ.
ಅಕ್ರಮವಾಗಿ ಕಾರ್ ನಲ್ಲಿ ಡ್ರಗ್ಸ್ ಸಪ್ಲೈ ಮಾಡ್ತಾ ಮಾಡ್ತಾ ಇದ್ದ ಅನ್ನೋ ಮಾಹಿತಿ ಮೇರೆಗೆ ಪೊಲೀಸ್ ದಾಳಿ. ಪೊಲೀಸರು ಕಾರ್ ನಿಲ್ಲಿಸಿ ತಪಾಸಣೆ ಮಾಡುವಾಗ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದರಿಂದ ಮುಖ್ಯಪೇದೆ ಗುರುಮೂರ್ತಿ ಗೆ ಗಾಯ ಆಗಿದೆ.
ಚೌಕ್ ಠಾಣೆ PI ರಾಘವೇಂದ್ರ ಅವರಿಂದ ಫೈರಿಂಗ್‌ಮಾಡಿದ್ದಾರೆ. ಗಾಯಾಳು ಸುಪ್ರೀತ್ ನನ್ನ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಸೆಂಟರ್ ಗೆ ದಾಖಲಿಸಲಾಗಿದೆ.
ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಡಿಸಿಸಿ ಕನ್ನಿಕಾ ಸಿಕ್ರಿ ವಾಲ್, ಇನ್ಸ್ಪೆಕ್ಟರ್ ಸಂತೋಷ ತಟ್ಟೆಪಲ್ಕಿ ಇನ್ನೂ ಇತರರು ಭೇಟಿ ನೀಡಿದರು. ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.