ವಿಜಯವಾಣಿ ಸುದ್ದಿಜಾಲ ಹಾಸನ
ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ್ದೇ ಸುದ್ದಿಯಾಗಿದೆ. ಸಮಾಜಕ್ಕೆ ಆದರ್ಶವಾಗಬೇಕಿದ್ದ ನಟ, ನಟಿಯರು ದುಶ್ಚಟಗಳ ದಾಸರಾಗಿ ಕಂಟಕವಾಗಿ ಪರಿಣಮಿಸಿದ್ದಾರೆ. ರಾಜಕೀಯ, ಚಿತ್ರರಂಗ, ಕ್ರಿಕೆಟ್ ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್ ಜಾಲ ಇದೆ ಎಂಬ ಗುಮಾನಿ ಹರಡಿದೆ. ಉತ್ತಮ ವ್ಯಾಸಂಗದ ಮೂಲಕ ದೇಶ ಅಭಿವೃದ್ಧಿಯಲ್ಲಿ ಗುರುತಿಸಿಕೊಳ್ಳಬೇಕಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಡ್ರಗ್ಸ್ ಸೇವನೆಯಲ್ಲಿ ತೊಡಗಿದ್ದಾರೆಂಬ ವರದಿಗಳು ಭಯ ಹುಟ್ಟಿಸುತ್ತಿವೆ ಎಂದರು.
ರಾಜ್ಯ ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಎಷ್ಟೇ ಪ್ರಭಾವಿ ವ್ಯಕ್ತಿ ಪಾಲ್ಗೊಂಡ್ದಿರೂ ಯಾವ ಒತ್ತಡಕ್ಕೆ ಮಣಿಯದೆ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ರಾಜ್ಯ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಹುಲ್ ಕಿಣಿ, ಖಂಡೇಶ್ವರ್, ನಗರಾಧ್ಯಕ್ಷ ರೂಪೇಶ್, ಗ್ರಾಮಾಂತರ ಅಧ್ಯಕ್ಷ ಯಶವಂತ್, ಉಪಾಧ್ಯಕ್ಷ ಚೇತನ್ ಹಾಗೂ ಇತರರಿದ್ದರು.
ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ: ಮಾದಕ ವಸ್ತುಗಳ ಜಾಲವನ್ನು ಭೇದಿಸಿ ರಾಜ್ಯವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಟ್ರಸ್ಟ್ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ನಿರ್ದೆಶಕ ಡಿ.ಜಯರಾಮ್ ಹಾಗೂ ಇತರರಿದ್ದರು.