ಜಿಲ್ಲೆ

10 ತಾಸುಗಳ ಬಳಿಕ ಮತ್ತಿನಿಂದ ಹೊರಬಂದ ಅನಿಕಾ!

ಬೆಂಗಳೂರು: ಎನ್‍ಸಿಬಿ ಬಲೆಗೆ ಬಿದ್ದಿರುವ ಲೇಡಿ ಡ್ರಗ್ ಡೀಲರ್ ಅನಿಕಾ ಕಳೆದ ಆರು ವರ್ಷದಿಂದ ಈ ದಂಧೆ ನಡೆಸುತ್ತಿದ್ದಳು ಎಂಬ ಮಾಹಿತಿ ಹೊರಬಂದಿದೆ.

ಅನಿಕಾ, ವಿದ್ಯಾರ್ಥಿನಿಯಾಗಿದ್ದಾಗಲೇ ಡ್ರಗ್ ವಿತರಣೆ ಮಾಡುತ್ತಿದ್ದಳು. ಸ್ವತಃ ಡ್ರಗ್ ವ್ಯಸನಿಯಾಗಿದ್ದಳು. ಗುರುವಾರ ಅನಿಕಾಳನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದಾಗ ಆಕೆ ಡ್ರಗ್ ಸೇವನೆ ಮಾಡಿದ್ದಳು. ಆಕೆಯನ್ನು ಅಧಿಕಾರಿಗಳು ಕಚೇರಿಗೆ ಕರೆತಂದು 10 ಗಂಟೆಯ ನಂತರ ಆಕೆ ಮತ್ತಿನಿಂದ ಹೊರಬಂದ ಬಳಿಕ ತನಿಖೆ ಮಾಡಿದ್ದಾರೆ.

ತನಿಖೆ ವೇಳೆ ತಾನೂ ಬೆಂಗಳೂರಿನಲ್ಲೇ ವ್ಯಾಸಂಗ ಮಾಡಿದ್ದು, ಕಾಲೇಜು ದಿನಗಳಿಂದಲೇ ಡ್ರಗ್ ವಿತರಿಸುತ್ತಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾಳೆ.