ಚನ್ನಮ್ಮನ ಕಿತ್ತೂರು(ಬೆಳಗಾವಿ): ಮಕ್ಕಳ ಮಾರಾಟ ಪ್ರಕರಣಕ್ಕೆ ಹೊಸದು ಪಡೆದುಕೊಂಡಿದ್ದು, ಕಿತ್ತೂರು ಪಟ್ಟಣದ ನಕಲಿ ವೈದ್ಯ ಗಫರ್ ಅಬ್ದುಲ್ ಲಾಡಖಾನ್ ಭ್ರೂಣಗಳ ಹತ್ಯೆ ಮಾಡುತ್ತಿದ್ದ ಎಂಬುದು ಪೊಲೀಸ್ ತನಿಕೆಯಲ್ಲಿ ಸ್ಪೋಟಕ ಮಾಹಿತಿ ಬಯಲಾಗಿದೆ.
ಜಿಲ್ಲಾಧಿಕಾರಿ ನಿತೀಶ ಪಾಟೀಲ ಸೂಚನೆ ಮೇರೆಗೆ ಪೊಲೀಸರು, ಆರೋಗ್ಯ ಇಲಾಖೆ, ಎಫ್ ಎಸ್ ಎಲ್ ತಂಡ ಇಂದು ಜೂನ್ 16ರಂದು ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಬಳಿ ನಕಲಿ ವೈದ್ಯನ ಫಾರ್ಮ್ ಹೌಸ್ ಪರಿಶೀಲನೆ ನಡೆಸಿತು. ಆರೋಪಿ ಅಬ್ದುಲ್ ಗಫಾರ್ ಲಾಡಖಾನ್ ಫಾರ್ಮ್ ಹೌಸ್ ಪರಿಶೀಲನ ವೇಳೆ ತೋಟದಲ್ಲಿ ಮೂರು ಭ್ರೂಣಗಳು ಪತ್ತೆಯಾಗಿವೆ.
ಈ ಭ್ರೂಣಗಳನ್ನು ತಂದು ಹೊಳುತ್ತಿದ್ದ ಅಬ್ದುಲ್ ಗೆಫಾರ್ ಲಡಾಖನ್ ಸಹಾಯಕ ರೋಹಿತ್ ಕುಪ್ಪನಗೌಡನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಬ್ದುಲ್ ಗಫಾರನ ಬಳಿ ರೋಹಿತ್ ಹಲೋ ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದು ಇವನನ್ನು ಬಂಧಿಸಿ ತೀವ್ರ ಕಾರ್ಯಾಚರಣೆ ನಡೆಸಿದ್ದು ಮತ್ತಷ್ಟು ವಿಷಯಗಳು ಬಯಲಿಗೆ ಬಂದಿವೆ ಇದು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಎಚ್ಒ ಡಾ. ಮಹೇಶ್ ಕೋಣಿ, ಎಸ್ ಪಿ ಪ್ರಭಾವತಿ ಪಕ್ಕೀರಪೂರ, ಬೈಲಹೊಂಗಲ ಡಿವೈಎಸ್ಪಿ ರವಿ ನಾಯಕ್, ಮೂರು ಸಿಪಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.