ಜಿಲ್ಲೆ

ಡ್ರಾಪಿನ್ ವಾರಿಯರ್ಸ್ ಚಾಂಪಿಯನ್

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಆಯೋಜಿಸಿದ್ದ ಹುಬ್ಬಳ್ಳಿ ಪ್ರಿಮೀಯಂ ಲೀಗ್ (ಎಚ್​ಪಿಎಲ್) ಜ್ಯೂನಿಯರ್ ಕ್ರಿಕೆಟ್ ಟೂರ್ನಿಯಲ್ಲಿ ಧಾರವಾಡದ ಡ್ರಾಪಿನ್ ವಾರಿಯರ್ಸ್ ಚಾಂಪಿಯನ್ ಆಗಿದೆ.

ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಸಿಡಿಎಂ ಜೆಮ್್ಸ ವಿರುದ್ಧ 11 ರನ್​ಗಳ ಅಂತರದಿಂದ ಜಯ ಗಳಿಸಿ ಡ್ರಾಪಿನ್ ವಾರಿಯರ್ಸ್ ಟ್ರೋಫಿ ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಡ್ರಾಪಿನ್ 19.5 ಓವರ್​ಗಳಲ್ಲಿ 94ರನ್​ಗೆ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ ಸಿಡಿಎಂ ಜೆಮ್್ಸ 27 ಓವರ್​ಗಳಲ್ಲಿ 83ರನ್​ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.

ಡ್ರಾಪಿನ್ ವಾರಿಯರ್ಸ್​ನ ಸ್ವಯಂ ಖೋತ (14 ವಯೋಮಿತಿ) ಹಾಗೂ ಅಥರ್ವ ಮಾನೆ (16 ವಯೋಮಿತಿ) ಪಂದ್ಯಶ್ರೇಷ್ಠ , ಆನಂದ್ಸ್ ಸ್ಪೋರ್ಟ್ಸ್ ಕಂಪನಿಯ ಸ್ಕಂದ ಶೆಟ್ಟಿ (14 ವಯೋಮಿತಿ) ಹಾಗೂ ಜೇವರ್ ಗ್ಯಾಲರಿ ಡೈಮಂಡ್ಸ್​ನ ಜಾಯ್ ಸುಳ್ಳದ (16 ವಯೋಮಿತಿ) ಉತ್ತಮ ಬ್ಯಾಟ್ಸಮನ್, ವಿವಾನ ಭೂಸದ (14 ವಯೋಮಿತಿ) ಹಾಗೂ ಡ್ರಾಪಿನ್ ವಾರಿಯರ್ಸ್​ನ ಸಾಗರ ಕಮ್ಮಾರ (16ವಯೋಮಿತಿ)ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಸಿಡಿಎಂ ಜೆಮ್್ಸ ತಂಡದ ಅಭಿಷೇಕ ಶಿವಸಿಂಪಿಗೇರ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಉದ್ಯಮಿ ಭರತ ಬೊಮ್ಮಾಯಿ, ಎಸ್ವಿ ಕನ್ಸ್​ಟ್ರಕ್ಷನ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್ ನಿರ್ದೇಶಕ ಕೆ. ರಮಣಮೂರ್ತಿ ಹಾಗೂ ಲೆಕ್ಕ ಪರಿಶೋಧಕ ಚನ್ನವೀರ ಮುಂಗರವಾಡಿ ಬಹುಮಾನ ವಿತರಿಸಿದರು. ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಟ್ರಸ್ಟಿ ಬಾಬಾ ಭೂಸದ ಅಧ್ಯಕ್ಷತೆ ವಹಿಸಿದ್ದರು. ಉತೇಜ ಕೊಂಡವೀಟಿ ಇದ್ದರು. ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್​ನ ಕಾರ್ಯದರ್ಶಿ ಅಮಿತ ಭೂಸದ ವಂದಿಸಿದರು.

ಸಂಕ್ಷಿಪ್ತ ಸ್ಕೋರ್:

ಡ್ರಾಪಿನ್ ವಾರಿಯರ್ಸ್ ಧಾರವಾಡ: 94ಕ್ಕೆ ಆಲೌಟ್ (ಅಥರ್ವ ಮಾನೆ 33ಅ, ಸ್ವಯಂ ಖೋತ 17, ಶುಭ ಮುಂಗರವಾಡಿ 23ಕ್ಕೆ 3). ಸಿಡಿಎಂ ಜೆಮ್್ಸ: 83ಕ್ಕೆ ಆಲೌಟ್ (ಸುಪ್ರಿತ್ ನೇಜೆ 30, ಶುಭ ಮುಂಗರವಾಡಿ 13, ಸಾಗರ ಕಮ್ಮಾರ 18ಕ್ಕೆ 3, ಸ್ವಯಂ ಖೋತ 11ಕ್ಕೆ 2, ಎನ್. ಷಣ್ಮುಖ 22ಕ್ಕೆ 2).