ಚಿಂತಾಮಣಿ: ನಗರ ಹೊರವಲಯದ ಕಡಪಾ ಬೈಪಾಸ್‌ನಲ್ಲಿ ಮಂಗಳವಾರ ಮಹಿಳೆಯೊಬ್ಬರಿಗೆ ಬೈಕ್‌ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ದು ಖದೀಮ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಸಿದುಕೊಂಡು ಪಾರಿಯಾಗಿದ್ದಾನೆ. ಮುನುಗನಹಳ್ಳಿ ಲಕ್ಷ್ಮೀದೇವಮ್ಮ ಸರ ಕಳೆದುಕೊಂಡವರು. ನಗರದ ಹೊರವಲಯದ ಚಿನ್ನಸಂದ್ರ ಗ್ರಾಮದ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಮಹಿಳೆ ಚಿಕಿತ್ಸೆ ಪಡೆದು ಮುನುಗನಹಳ್ಳಿಗೆ ಬೆಂಗಳೂರು-ಕಡಪಾ ಬೈಪಾಸ್‌ನಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬಾಲಿಸಿ ಬಂದ ಬೈಕ್ ಸವಾರನೊಬ್ಬ ಬೈಕ್ ನಿಲ್ಲಿಸಿ, ‘ಅಜ್ಜಿ ಗಾಡಿ ಹತ್ತು ಊರಿಗೆ ಬಿಡುತ್ತೇನೆ’ ಎಂದು ಪರಿಚಯಸ್ಥನಂತೆ ಮಾತನಾಡಿಸಿ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಗ್ರಾಮದ ಸಮೀಪದ ಬಂಡಿ ದಾರಿಯಲ್ಲಿ ಬೈಕ್ ನಿಲ್ಲಿಸಿ 50 ಗ್ರಾಂ ತೂಕದ ಮಾಂಗಲ್ಯಸರ ಕಸಿದುಕೊಂಡು ಪರಾರಿಯಾಗಿದ್ದಾನೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.