ಹುಣಸೂರು : ತಾಲೂಕಿನ ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ 2024-25 ನೇ ಸಾಲಿನ ಮಾರುಕಟ್ಟೆ ಚಟುವಟಿಕೆಗಳಿಗೆ ಸೋಮವಾರ ಜನಪ್ರತಿನಿಗಳು ಮತ್ತು ತಂಬಾಕು ಮಂಡಳಿ ಅಕಾರಿಗಳು ಚಾಲನೆ ನೀಡಿದರು.
ಶಾಸಕ ಜಿ.ಡಿ.ಹರೀಶ್‌ಗೌಡ ಮತ್ತು ಮಾಜಿ ಸಂಸದ ಪ್ರತಾಪ್‌ಸಿಂಹ ಹರಾಜು ಮಾರುಕಟ್ಟೆ ಸಂಖ್ಯೆ 2, 3 ಮತ್ತು 64ರಲ್ಲಿ ಪೂಜೆ ಸಲ್ಲಿಸಿ ಮಾರುಕಟ್ಟೆ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ನಂತರ ಮಾರುಕಟ್ಟೆ ಸಂಖ್ಯೆ 2ರಲ್ಲಿ ರೈತರು ತಂದಿದ್ದ ತಂಬಾಕು ಬೇಲ್‌ಗಳನ್ನಿರಿಸಿ ಈ ಸಾಲಿನ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಎಲ್ಲ ಮೂರು ಮಾರುಕಟ್ಟೆಯಲ್ಲೂ ಮೊದಲ ದಿನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ 7 ಕಂಪನಿಗಳು ಒಂದು ಕೆಜಿ ತಂಬಾಕಿಗೆ 290 ರೂ.ಗಳನ್ನು ನೀಡುವ ಮೂಲಕ ಪ್ರಸ್ತುತ ಸಾಲಿನಲ್ಲಿ ಉತ್ತಮ ದರ ದೊರಕುವ ನಿರೀಕ್ಷೆಯನ್ನು ರೈತರಲ್ಲಿ ಮೂಡಿಸಿದರು.
ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಇತ್ತೀಚೆಗೆ ಸಂಪನ್ನಗೊಂಡ ಆಂಧ್ರಪ್ರದೇಶದ ಹರಾಜು ಮಾರುಕಟ್ಟೆಯಲ್ಲಿ ಕೆಜಿ ತಂಬಾಕಿಗೆ ಗರಿಷ್ಠ 411 ರೂ.ಗಳು ದೊರಕಿದ್ದು, ಕರ್ನಾಟಕ ರಾಜ್ಯದ ತಂಬಾಕು ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸುವ ತಂಬಾಕು ಆಗಿದ್ದು, ಖರೀದಿದಾರರು ಇದೇ ರೀತಿಯ ಉತ್ತಮ ದರವನ್ನು ನಮ್ಮ ರೈತರಿಗೂ ನೀಡಬೇಕು. ಹವಾಮಾನ ವೈಪರೀತ್ಯದ ನಡುವೆ ರೈತರು ಕಷ್ಟಪಟ್ಟು ತಂಬಾಕು ಬೆಳೆದಿದ್ದಾರೆ. ಬೆಳೆ ಪ್ರಮಾಣ ಅಲ್ಪಮಟ್ಟಿಗೆ ಕುಸಿದಿದೆ. ಹಾಗಾಗಿ 300ರೂ.ಗಳಿಗೆ ಕಡಿಮೆಯಾಗದಂತೆ ಮಂಡಳಿ ಅಕಾರಿಗಳು ಮತ್ತು ಖರೀದಿ ಕಂಪನಿಗಳು ನೋಡಿಕೊಳ್ಳಬೇಕು ಎಂದರು.
ದರ ಇಳಿಸಲು ಕುಂಟು ನೆಪ ಬೇಡ:
ಮಾಜಿ ಸಂಸದ ಪ್ರತಾಪ್‌ಸಿಂಹ ಮಾತನಾಡಿ, 10 ವರ್ಷಗಳ ತಮ್ಮ ಅಕಾರಾವಯಲ್ಲಿ ತಂಬಾಕು ಬೆಳೆಯುವ ರೈತರಿಗೆ ನೇರವಾಗಿ ಹಣ ಖಾತೆಗೆ ಸಂದಾಯವಾಗುವಂತೆ ಕ್ರಮ ವಹಿಸಿರುವುದೂ ಸೇರಿದಂತೆ ಶೂನ್ಯ ದಂಡ ಶುಲ್ಕ ಜಾರಿ, ಸಕಾಲಕ್ಕೆ ರಸಗೊಬ್ಬರಗಳ ವಿತರಣೆಯಂತಹ ಕ್ರಮ ಕೈಗೊಂಡಿದ್ದೇನೆ. ಇದೀಗ ಮಾರುಕಟ್ಟೆ ಆರಂಭಗೊಂಡಿದ್ದು, ದೀಪಾವಳಿಯ ನಂತರ ತಂಬಾಕು ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದೇವೆ, ಬೇಡಿಕೆ ಬಗ್ಗೆ ಮಾಹಿತಿ ಪಡೆದು ದರ ನೀಡುತ್ತೇವೆ ಎಂಬಿತ್ಯಾದಿ ಕುಂಟುನೆಪ ಹೇಳಿ ದರದಲ್ಲಿ ಇಳಿಕೆ ಮಾಡಬಾರದು. ಕಳೆದ ಸಾಲಿನಲ್ಲಿ ಹೀಗಾಗಲು ನಾನು ಬಿಟ್ಟಿಲ್ಲಿ. ಈ ಬಾರಿಯೂ ಇಂತಹ ನೆಪಗಳನ್ನು ಹೇಳಿ ಬೆಲೆ ಇಳಿಸುವ ಕಾರ್ಯ ಮಾಡಬಾರದು ಎಂದರು.
ಲೇಬರ್ ಪ್ರಾಬ್ಲಂ: ಹಿರಿಯ ಮುಖಂಡ ನಾಗರಾಜ ಮಲ್ಲಾಡಿ ಮತ್ತು ನಿಲುವಾಗಿಲು ಪ್ರಭಾಕರ್ ಮಾತನಾಡಿ, ತಂಬಾಕು ಮಾರುಕಟ್ಟೆಯಲ್ಲಿ ಬೇಲ್‌ಗಳನ್ನು ಕಟ್ಟುವ ವೇಳೆ ಸಣ್ಣಪುಟ್ಟ ರೈತರಿಂದ ಲೇಬರ್‌ಗಳು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಆಡಳಿತ ಮಂಡಳಿ ಮತ್ತು ರೈತ ಮುಖಂಡರು ಗಮನಿಸಬೇಕು. ರೈತರು ತಂಬಾಕು ಬೇಲ್‌ಗಳನ್ನು ಮಾರುಕಟ್ಟೆಗೆ ತಂದ ನಂತರ ಬೇಲ್‌ಗಳನ್ನು ರಕ್ಷಿಸುವ ಜವಾಬ್ದಾರಿ ಮಂಡಳಿಯದ್ದಾಗಿದೆ. ಹೀಗಿದ್ದರೂ ವಿನಾಕಾರಣ ಬೇಲ್‌ಗಳನ್ನು ಸಿಆರ್(ರಿಜೆಕ್ಟ್)ಮಾಡುತ್ತೇವೆ ಎಂದು ಇಲ್ಲಸಲ್ಲದ ಕಾರಣವೊಡ್ಡಿ ಲೇಬರ್‌ಗಳು ರೈತರಿಂದ ಒಂದು ಬೇಲ್‌ಗೆ ಒಂದು ಸಾವಿರ ರೂ.ವರೆಗೂ ಹಣ ಪೀಕಿಸುತ್ತಿದ್ದು, ಖರೀದಿ ಕಂಪನಿಗಳು ಇದರಲ್ಲಿ ಭಾಗಿಯಾಗಿವೆ. ರೈತರು ಇದಕ್ಕೆ ಸೊಪ್ಪು ಹಾಕದೆ ಧೈರ್ಯವಾಗಿ ಎದುರಿಸಬೇಕು. ಮಂಡಳಿ ಮತ್ತು ಜನಪ್ರತಿನಿಗಳು ರೈತರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ಉಪಾಧ್ಯಕ್ಷ ಅಶೋಕ್, ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ, ಗಣೇಶ್ ಕುಮಾರಸ್ವಾಮಿ, ರಮೇಶ್‌ಕುಮಾರ್, ನಾಗರಾಜ ಮಲ್ಲಾಡಿ, ಬಿ.ಎನ್.ನಾಗರಾಜಪ್ಪ, ಶೀರೇನಹಳ್ಳಿ ಬಸವರಾಜು, ಹರವೆ ಶ್ರೀಧರ್, ಅಗ್ರಹಾರ ನಂಜುಂಡೇಗೌಡ, ರೈತಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ನಿಲುವಾಗಿಲು ಪ್ರಭಾಕರ್, ವಕೀಲ ಮೂರ್ತಿ, ಕ್ರಾಪ್ ಕಮಿಟಿ ಮಾಜಿ ಸದಸ್ಯ ಕಟ್ಟೆಮಳಲವಾಡಿ ಕಿರಣ್‌ಕುಮಾರ್, ವಿಜಯಕುಮಾರ್, ಹರಾಜು ಅೀಕ್ಷಕರಾದ ಚಂದ್ರಶೇಖರ್, ಸಿದ್ದರಾಜು, ಬ್ರಿಜ್ ಭೂಷನ್, ಫೀಲ್ಡ್ ಅಕಾರಿಗಳಾದ ಕಿರಣ್‌ಕುಮಾಋ ಮಂಜುನಾಥ್, ಐಟಿಸಿಯ ಪೂರ್ಣೇಶ್ ಮತ್ತು ರೈತರು ಹಾಜರಿದ್ದರು.