ತಾಳಿಕೋಟೆಯಲ್ಲಿ ಹಿಂದು ಮಹಾ ಗಣಪತಿ ಮಂಡಳಿಯ ಪ್ರಚಾರ ರಥಕ್ಕೆ ಶ್ರೀಗಳು, ಗಣ್ಯರು ಚಾಲನೆ ನೀಡಿದರು. 
ಜಿಲ್ಲೆ

ಹಿಂದು ಮಹಾ ಗಣಪತಿ ಪ್ರಚಾರ ರಥಕ್ಕೆ ಚಾಲನೆ

ತಾಳಿಕೋಟೆ: ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದು ಮಹಾ ಗಣಪತಿ ಮಂಡಳಿಯ ವತಿಯಿಂದ ಪ್ರತಿಷ್ಠಾಪಿಸುತ್ತ ಬರಲಾಗಿರುವ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ 9 ದಿನ ನಡೆಯಲಿರುವ ಧರ್ಮ ಜಾಗೃತಿ, ಸನಾತನ ಧರ್ಮ ಉಳಿಯುವಿಗಾಗಿ ನಡೆಯುವ ಸಮಾರಂಭದ ಪ್ರಚಾರ ರಥಕ್ಕೆ ಶ್ರೀಗಳು, ಗಣ್ಯರು ಚಾಲನೆ ನೀಡಿದರು.

ಕೆಸರಟ್ಟಿಯ ಶಂಕರಲಿಂಗ ಮಠದ ಸೋಮಲಿಂಗ ಸ್ವಾಮಿಗಳು, ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಇತರರಿದ್ದರು.
ರಾಜವಾಡೆಯ ಶಿವ ಭವಾನಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಶಿವಭವಾನಿ ಮಂದಿರದ ಅರ್ಚಕ ವೇ.ಸಂತೋಷಭಟ್ ಜೋಶಿ ಮಾತನಾಡಿ, ದಶಮಾನೋತ್ಸವದ ಸಂಭ್ರಮದಲ್ಲಿರುವ ಹಿಂದು ಮಹಾ ಗಣಪತಿ ಮಂಡಳಿ ವತಿಯಿಂದ ಪ್ರತಿವರ್ಷವೂ ಧರ್ಮ ಜಾಗೃತಿ ಕಾರ್ಯಗಳನ್ನು ಮಾಡುತ್ತ ಬರಲಾಗಿದೆ. ಅದರಂತೆ ಈ ವರ್ಷವೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಈ ಧರ್ಮ ಪ್ರಚಾರಕ ಕಾರ್ಯದಲ್ಲಿ ಹಿಂದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು. ಹಿಂದು ಮಹಾ ಗಣಪತಿ ಮಂಡಳಿಯ ಕಾರ್ಯಕರ್ತರು ಉಪಸ್ಥಿತರಿದ್ದರು.