ಬಸ್ ಸಂಚಾರಕ್ಕೆ ಚಾಲನೆ  
ಜಿಲ್ಲೆ

ಮಣ್ಣಿನ ಸಂಸ್ಕೃತಿ ಉಳಿಸುವುದು ಎಲ್ಲರ ಜವಾಬ್ದಾರಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಹಿರಿಯರು ಬಳುವಳಿಯಾಗಿ ನೀಡಿದ ಆಚಾರ ವಿಚಾರವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಮುಖಂಡ ಎಂ.ಎನ್.ರವಿಕುಮಾರ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಲೋಹಿತ್‌ನಗರದ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಬಳಿ ಶನಿವಾರ ಬೆಳಗ್ಗೆ ತಮಿಳುನಾಡಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಶ್ರೀ ಓಂಶಕ್ತಿ ದೇವಾಲಯಕ್ಕೆ ತೆರಳುವ ಮಾಲಾಧಾರಿಗಳ ಯಾತ್ರೆಯ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ವ್ರತಾಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕ. ಹಲವಾರು ಹಿರಿಯ ನಾಗರಿಕರು ದೇವರ ಮೇಲೆ ಅಪಾರ ನಂಬಿಕೆ ಇಟ್ಟು ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ನಡೆಸಿದ್ದು, ಅದನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಅಯ್ಯಪ್ಪಸ್ವಾಮಿ ಹಾಗೂ ಓಂ ಶಕ್ತಿ ಭಕ್ತರು ಈ ಸಮಯದಲ್ಲಿ ಮಾಲೆ ಧರಿಸುವುದು ಸಾಮಾನ್ಯವಾಗಿದ್ದು, ಕೆಲ ವ್ರತಧಾರಿಗಳಿಗೆ ಖರ್ಚು ನಿಭಾಯಿಸಲು ಕಷ್ಟವಾಗುವ ಸಂದರ್ಭಗಳಿವೆ. ವ್ರತದಾರಿಗಳಿಗೆ ಅನುಕೂಲಗುವ ಹಾಗೂ ಲೋಕಕಲ್ಯಾಣದ ದೃಷ್ಟಿಯಿಂದ ಉಚಿತ ಬಸ್, ಊಟ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಲೋಹಿತ್‌ನಗರದ ಅನ್ನಪೂರ್ಣೇಶ್ವರಿ ಬಡಾವಣೆ, ಭೂಮಿಕಾ ಬಡಾವಣೆ ಸೇರಿ ವಿವಿಧ ಬಡಾವಣೆಯ 250ಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳು ಓಂಶಕ್ತಿಯಾತ್ರೆಗೆ ತೆಳಿದ್ದರು.