ಹರಪನಹಳ್ಳಿ: ಅರಸೀಕೆರೆ ಗ್ರಾಮದಲ್ಲಿ ಅಜ್ಜಯ್ಯ, ವೀರಣ್ಣ, ಕಾಳಮ್ಮ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಊರ ಹೊರಗಿನ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಎತ್ತುಗಳ ಬಂಡಿ ಓಡಿಸಲಾಯಿತು. ಕೋಲಶಾಂತೇಶ್ವರ ಮಠದ ಶಾಂತಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬನ್ನಿ ವಿನಿಮಯಕ್ಕೆ ಚಾಲನೆ ನೀಡಲಾಯಿತು. ಮಾಜಿ ಸಂಸದ ವೈ.ದೇವೇಂದ್ರಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಪ್ರಮುಖರಾದ ಪ್ರಶಾಂತ್ ಪಾಟೀಲ್, ಎ.ಎಚ್.ಪಂಪಣ್ಣ, ಕೆ.ಅಂಜಿನಪ್ಪ, ನಾಗಣ್ಣ ಇತರರಿದ್ದರು.