ಜಿಲ್ಲೆ

ಕಾರಿನಲ್ಲೇ ಹೃದಯಾಘಾತ, ಚಾಲಕ ಸಾವು

ಶಿವಮೊಗ್ಗ: ವಿನೋಬನಗರ ಪೊಲೀಸ್ ಚೌಕಿ ಬಳಿ ಕಾರು ಚಾಲನೆ ಮಾಡುವಾಗಲೇ ಹೃದಯಾಘಾತ ಸಂಭವಿಸಿ ಚಾಲಕ ಮೃತಪಟ್ಟಿದ್ದಾರೆ.

ಹುಡ್ಕೋ ಕಾಲನಿ ನಿವಾಸಿ ಮಲ್ಲಿಕಾರ್ಜುನ್(45) ಮೃತ ಕಾರು ಚಾಲಕ. ವಿನೋಬನಗರ ಪೊಲೀಸ್ ಚೌಕಿ ಬಳಿ ಕಾರು ಚಾಲನೆ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ವೈದ್ಯರನ್ನ ಸಂಪರ್ಕಿಸಲು ತೆರಳುವಾಗ ಕಾರಿನಲ್ಲೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.