ಅಥಣಿ ಗ್ರಾಮಿಣ: ಅಥಣಿ ತಾಲೂಕಿನ ಯಲ್ಲಮ್ಮವಾಡಿ ಕ್ರಾಸ್ ಬಳಿಯ ಸಂಕೇಶ್ವರ ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನ ಹಾಯ್ದು ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಟನೆ ಬುಧವಾರ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಲಾಪುರ ಗ್ರಾಮದ ಕಲ್ಲಪ್ಪ ಬಸಪ್ಪ ಬೇಲಿ (34) ಮೃತ. ಈತ ಲಾರಿ ಚಾಲಕನಾಗಿದ್ದು, ಲಾರಿಯಲ್ಲಿ ಮೆಕ್ಕೆಜೋಳ ತುಂಬಿಕೊಂಡು ಮಾರಲು ಹೊರಟಿದ್ದ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ದಾಬಾವೊಂದರಲ್ಲಿ ಊಟ ಮಾಡಿ ಬರುತ್ತಿದ್ದಾಗ ಹಿಂಬದಿಯಿಂದ ವಾಹನ ಡಿಕ್ಕಿ ಹೊಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಐಗಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಚಾಲಕ ಅಮಿರಸಾಹಲ್ ಅಬ್ದುಲ್ಸಾಬ್ ಇನಾಮದಾರ್ನನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳಕ್ಕೆ ಅಥಣಿ ಸಿಪಿಐ ಸಂತೋಷ ಹಳ್ಳೂರ, ಐಗಳಿ ಪಿಎಸ್ಐ ಚಂದ್ರಶೇಖರ ಸಾಗನೂರ, ತನಿಖಾ ಸಹಾಯಕ ಪ್ರಕಾಶ ಕುರಿ ಭೇಟಿ ನೀಡಿ ಪರಿಶೀಲಿಸಿದರು.