ಜಿಲ್ಲೆ

ಟಿಪ್ಪರ್​ ಪಲ್ಟಿಯಾಗಿ ಚಾಲಕ ಸಾವು

ತುಮಕೂರು ಡೆಸ್ಕ್

ತಿಪಟೂರು: ತಾಲೂಕಿನ ಈರಲಗೆರೆಯ ಕ್ರಷರ್​ನಲ್ಲಿ ಜಲ್ಲಿತುಂಬಿದ ಟಿಪ್ಪರ್​ ಬುಧವಾರ ಚಾಲಕನ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಭದ್ರಾವತಿ ತಾಲೂಕು ಗಾಂಧಿನಗರ ವಾಸಿ ಚನ್ನಕೇಶವ(48) ಮೃತ ಚಾಲಕ. ಟನೆ ನಡೆದ ಸ್ಥಳಕ್ಕೆ ಅಡಿಷನಲ್​ ಎಸ್ಪಿ ಪುರುಷೋತ್ತಮ್​, ಉಪವಿಭಾಗದ ಎಎಸ್ಪಿ ಯಶುಕುಮಾರ್​, ಸರ್ಕಲ್​ ಇನ್​ಸ್ಪೆಕ್ಟರ್​ ಚಂದ್ರಶೇಖರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.