ಜಿಲ್ಲೆ

ಟ್ರಾೃಕ್ಟರ್ ಚಕ್ರಕ್ಕೆ ಸಿಲುಕಿ ಚಾಲಕ ಸಾವು

ರವಿಕುಮಾರ್ ಪಿ. ಕೆ

ನಾಪೋಕ್ಲು: ಬೇತು ಗ್ರಾಮದ ಕೈಕಾಡು ಸಮೀಪ ಶುಕ್ರವಾರ ಸಂಜೆ ಟ್ರಾೃಕ್ಟರ್ ಚಲಾಯಿಸುತ್ತಿದ್ದವನು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಅದೇ ಟ್ರಾೃಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

ಕೈಕಾಡು ಗ್ರಾಮದ ನಿವಾಸಿ ನರೇಂದ್ರ (37) ಮೃತರು ನಾಪೋಕ್ಲು ಕಡೆಯಿಂದ ಕೈಕಾಡು ಕಡೆಗೆ ಟ್ರಾೃಕ್ಟರ್ ಚಲಾಯಿಸುತ್ತಿದ್ದ ವೇಳೆ ಕೈಕಾಡು ಸಮೀಪ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಕೆಳಗೆ ಬಿದ್ದು ಟ್ರಾೃಕ್ಟರ್ ಚಕ್ರಕ್ಕೆ ಸಿಲುಕಿದ್ದಾನೆ.

ಕೈಕಾಡು ಗ್ರಾಮದ ಕದ್ದಣಿಯಂಡ ಶ್ರೀ ಗಣೇಶ್ ಮಾಲೀಕತ್ವದ ಟ್ರಾೃಕ್ಟರ್‌ಗೆ ನರೇಂದ್ರ ಚಾಲಕನಾಗಿದ್ದ. ಅವರ ಲೈನ್ ಮನೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದ. ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.