ಜಿಲ್ಲೆ

ಆಟೋ ಪಲ್ಟಿಯಾಗಿ ಚಾಲಕ ಸಾವು

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ: ತಾಲೂಕಿನ ಕನ್ನಿದೊಡ್ಡಿ ಗೇಟ್​ ಬಳಿ ಭಾನುವಾರ ಕಾಡುಹಂದಿಗಳು ಅಡ್ಡಬಂದಿದ್ದರಿಂದ ಆಟೋ ಮಗುಚಿ ಬಿದ್ದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ತಾಲೂಕಿನ ಭೂಹಳ್ಳಿ ಗ್ರಾಮದ ರಾಮದಾಸಯ್ಯ (62) ಮೃತ. ಇದೇ ಗ್ರಾಮದ ನಾಗಮ್ಮ, ಮಂಗಳಮ್ಮ, ಲ್ಮಮ್ಮ, ಮುನಿವೆಂಕಟಮ್ಮ, ಮಹದೇವ ಹಾಗೂ ಮಂಜುಳಾ ಗಾಯಾಳುಗಳು.

ವೀಳ್ಯದೆಲೆ ಹಾಗೂ ಹೂವಿನ ವ್ಯಾಪಾರಕ್ಕಾಗಿ ರಾಮನಗರ ಮಾರುಕಟ್ಟೆಗೆ ತೆರಳುವ ವೇಳೆ ಕಾಡುಹಂದಿಗಳ ಗುಂಪು ಆಟೋಗೆ ಅಡ್ಡಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಆಟೋ ರಸ್ತೆ ಪಕ್ಕಕ್ಕೆ ಮಗುಚಿ ಬಿದ್ದಿದೆ. ತೀವ್ರ ಗಾಯಗೊಂಡಿದ್ದ ರಾಮದಾಸಯ್ಯ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಕ್ಕೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.