ಹಲಗೂರು: ಸಮೀಪದ ಮುತ್ತತ್ತಿ ಬಳಿಯ ಕಾವೇರಿ ವನ್ಯಜೀವಿ ವಲಯದಲ್ಲಿ ಬಸ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಜಿಂಕೆ ಭಾನುವಾರ ಸಂಜೆ ಸ್ಥಳದಲ್ಲೇ ಮೃತಪಟ್ಟಿದೆ.
ಬೆಂಗಳೂರಿನಿಂದ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಖಾಸಗಿ ಬಸ್ ಹಲಗೂರು ಕಡೆಗೆ ತೆರಳುತ್ತಿತ್ತು. ಕಾವೇರಿ ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ ಬಳಿ ರಸ್ತೆ ದಾಟುತ್ತಿದ್ದ ಜಿಂಕೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಜಿಂಕೆ ಸ್ಥಳದಲ್ಲೇ ಮೃತಪಟ್ಟಿದೆ. ಅಪಘಾತ ಮಾಡಿ ಬಸ್ ನಿಲ್ಲಿಸದೆ ಪರಾರಿಯಾಗುತ್ತಿದ್ದ ಚಾಲಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೆನ್ನತ್ತಿ ತಾಳವಾಡಿ ಚೆಕ್‌ಪೋಸ್ಟ್ ಬಳಿ ಚಾಲಕ ಗಾಲೀಬನನ್ನು ಬಂಧಿಸಿದ್ದಾರೆ.
ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್ ಕುಮಾರ್ ದೇವ್, ಉಪವಲಯ ಅರಣ್ಯ ಅಧಿಕಾರಿ ಸಾಜು ಫ್ರಾನ್ಸಿಸ್, ಮೋಹನ್‌ಕುಮಾರ್, ಗಸ್ತು ಪಾಲಕ ಮಹದೇವ್, ನಾಡಗೌಡ ಮತ್ತು ಸಿಬ್ಬಂದಿ ತಂಡದಲ್ಲಿದ್ದರು. ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.