ಬಾಳೆಹೊನ್ನೂರು ಹೋಬಳಿ ವಾಟ್‌ಕುಡಿಗೆ ರಸ್ತೆ ಬಳಿ ಆಟೋ ಚಾಲಕ ಸಮಿವುಲ್ಲನನ್ನು ಅಬಕಾರಿ ಪೊಲೀಸರು ಬಂಧಿಸಿದರು. ಅಬಕಾರಿ ನಿರೀಕ್ಷಕ ಎಂ.ಆರ್.ಶೇಖರ್, ಲೋಕೇಶ್, ಮಹಮ್ಮದ್ ಅಸ್ರಾವುದ್ದಿನ್ ಖಾನ್ ಇದ್ದರು. 
ಜಿಲ್ಲೆ

ಆಟೋದಲ್ಲಿ ಗಾಂಜಾ ಇರಿಸಿದ್ದ ಚಾಲಕ ಅರೆಸ್ಟ್

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಬಾಳೆಹೊನ್ನೂರು ಹೋಬಳಿ ವಾಟ್‌ಕುಡಿಗೆ ರಸ್ತೆ ಸಮೀಪ ಆಟೋದಲ್ಲಿ ಗಾಂಜಾ ಇರಿಸಿಕೊಂಡಿರುವುದನ್ನು ಪತ್ತೆ ಹಚ್ಚಿದ ಅಬಕಾರಿ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

ಬಿ.ಕಣಬೂರು ಗ್ರಾಪಂ ಮಸೀದಿ ಕೆರೆ ಆಟೋ ಚಾಲಕ ಸಮಿವುಲ್ಲ ಬಂಧಿತ ಆರೋಪಿ. ಗಸ್ತು ತಿರುಗುತ್ತಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ವಾಹನ ಪರಿಶೀಲನೆ ನಡೆಸಿದಾಗ ಆಟೋದ ಡ್ಯಾಶ್‌ಬೋರ್ಡ್‌ನಲ್ಲಿ 100 ಗ್ರಾಂ ಒಣ ಗಾಂಜಾ ಪತ್ತೆಯಾಯಿತು. ನಂತರ ಸಮಿವುಲ್ಲನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿತು. ಆರೋಪಿಯನ್ನು ಅಬಕಾರಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಎಂ.ಆರ್.ಶೇಖರ್, ಸಿಬ್ಬಂದಿ ಲೋಕೇಶ್, ಮಹಮ್ಮದ್ ಅಸ್ರಾವುದ್ದಿನ್ ಖಾನ್, ಕಿಜರ್‌ಅಹಮ್ಮದ್ ಪಾಲ್ಗೊಂಡಿದ್ದರು.