Drive to Mantralaya Padayatra 
ಜಿಲ್ಲೆ

ಮಂತ್ರಾಲಯ ಪಾದಯಾತ್ರೆಗೆ ಚಾಲನೆ

Vijayapura - Desk - Doddanagouda Gudihindin

ಹುನಗುಂದ: ಸುತಗುಂಡಾರ ಮತ್ತು ಕಟಗೂರದ ಗುರುಸಾರ್ವಭೌಮ ಪಾದಯಾತ್ರಾ ಸಂಘವು ಮಂತ್ರಾಲಯಕ್ಕೆ ಹಮ್ಮಿಕೊಂಡಿರುವ 25ನೇ ವರ್ಷದ ರಜತ ಮಹೋತ್ಸವ ಪಾದಯಾತ್ರೆಗೆ ತಾಪಂ ಇಒ ಮುರಳೀಧರ ದೇಶಪಾಂಡೆ ಚಾಲನೆ ನೀಡಿದರು.

ಪಟ್ಟಣದ ಗುಡ್ಡದ ಚಾಳದಿಂದ ನಗರ ಮತ್ತು ಗ್ರಾಮೀಣ ಪ್ರದೇಶದ 80ಕ್ಕೂ ಹೆಚ್ಚು ಹಿರಿಯರು ಮತ್ತು ಯುವಕರು ಪ್ರತಿವರ್ಷದಂತೆ ಈ ವರ್ಷವೂ ಮಂತ್ರಾಲಯಕ್ಕೆ ಭಾನುವಾರ ಪಾದಯಾತ್ರೆ ಕೈಗೊಂಡರು.

ಯಾತ್ರಾತ್ರಿಗಳು ಮೊದಲ ರಾತ್ರಿ ಆದಾಪೂರದಲ್ಲಿ ವಾಸ್ತವ್ಯ ಮಾಡಿ ಮುದಗಲ್, ಸಂತೆಕೆಲೂರ, ಅಮೀನಗಡ, ರಾಜೊಳ್ಳಿ, ಹನುಮಾಪುರ, ಅಣುಮಂತ್ರಾಲಯ ಮಾರ್ಗವಾಗಿ ಮಂತ್ರಾಲಯ ತಲುಪುವರು ಎಂದು ಮುರಳೀಧರ ದೇಶಪಾಂಡೆ ತಿಳಿಸಿದರು.

ಐದು ದಿಗಳವರೆಗೆ ನಡೆಯುವ ಪಾದಯಾತ್ರೆಯ ನೇತೃತ್ವವನ್ನು ಗಿರಿಗುಡ್ಡದ ಮತ್ತು ನರಸಿಂಹ ಕಾಳಗಿ ವಹಿಸುವರು ಎಂದರು.

ಹಿರಿಯರಾದ ರಾಜುಗುಡ್ಡದ, ಮಧುಸೂಧನ ಜೋಶಿ, ಭೀಮಣ್ಣ ದೇಸಾಯಿ, ವಿಜಯಲಕ್ಷ್ಮ್ಮೀ ಗುಡ್ಡದ, ಸುರೇಖಾ ಕುಲಕರ್ಣಿ, ಅಶ್ವಿನಿ ಪಾಠಕ, ಮಾಧವಿ ದೇಶಪಾಂಡೆ ಮತ್ತು ವಿದ್ಯಾಗುಡ್ಡದ ಯಾತ್ರಾರ್ಥಿಗಳಿಗೆ ಇದ್ದರು.