ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಆಡಿ ಕೃತಿಕ ಕಾವಡಿ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಶ್ರೀ ಸದಾಶಿವ ಸ್ವಾಮಿ, ಶ್ರೀ ಮರುಗೇಶ್ ಸ್ವಾಮಿ, ಎ.ಚಂದ್ರಘೋಷನ್, ರಾಮಪ್ಪ ಇತರರಿದ್ದರು. 
ಜಿಲ್ಲೆ

ಭದ್ರಿಗಿರಿ ಆಡಿ ಕೃತಿಕ ಕಾವಡಿ ಜಾತ್ರೆಗೆ ಚಾಲನೆ

ತರೀಕೆರೆ: ಎಂ.ಸಿ.ಹಳ್ಳಿ ಗ್ರಾಮದ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಆ.9ರಂದು ಜರುಗುವ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಧ್ವಜಾರೋಹಣ ನೆರವೇರಿಸಲಾಯಿತು.

ದೇಗುಲದ ಪ್ರಧಾನ ಅರ್ಚಕ ಶ್ರೀ ಮುರುಗೇಶ್ ಸ್ವಾಮಿ ನೇತೃತ್ವದಲ್ಲಿ ಪ್ರಾತಃಕಾಲ ದೇಗುಲದಲ್ಲಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿಗೆ ಹಾಲು, ತುಪ್ಪ, ಮೊಸರು, ಜೇನುತುಪ್ಪ, ಎಳನೀರು, ಸುಗಂಧ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಸ್ವಾಮಿಗೆ ವಿವಿಧ ಹೂವುಗಳಿಂದ ಅಲಂಕರಿಸಿ ಪೂಜಿಸಲಾಯಿತು.

ಎಂ.ಸಿ.ಹಳ್ಳಿ, ಕೃಷ್ಣಾಪುರ, ಕಲ್ಲತ್ತಿಪುರ, ಲಿಂಗದಹಳ್ಳಿ, ತರೀಕೆರೆ, ಭದ್ರಾವತಿ ಮತ್ತಿತರ ಕಡೆಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು. ಗಣಹೋಮ ಮತ್ತು ಧ್ವಜಾರೋಹಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಚಿಕ್ಕೋಡಿ ಶ್ರೀ ಸದಾಶಿವ ಸ್ವಾಮಿ, ಆರ್‌ಎಸ್‌ಎಸ್ ಪ್ರಾಂತೀಯ ವಿಭಾಗದ ಕಾರ್ಯದರ್ಶಿ ರಾಮಪ್ಪ, ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಎ.ಚಂದ್ರಘೋಷನ್, ಭದ್ರಾವತಿ ತಾಲೂಕು ತಮಿಳ್ ಸಂಘದ ಅಧ್ಯಕ್ಷ ರವಿಕುಮಾರ್, ದೇಗುಲ ಸೇವಾ ಸಮಿತಿ ಅಧ್ಯಕ್ಷ ಸೋಮು, ಕಾರ್ಯದರ್ಶಿ ಮಂಜುನಾಥ್, ಸದಸ್ಯರಾದ ತಿರುಮೂರ್ತಿ, ಮಂಜುಳಾ, ಕರುಣಾಮೂರ್ತಿ, ವೆಂಕಟೇಶ್, ಡಾ. ವಿಕ್ರಂ, ನಾಗರಾಜ್ ಇತರರಿದ್ದರು.