ಬೆಳಗಾವಿ: ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣ ಅನುಷ್ಠಾನಗೊಳಿಸಲು ಅಧ್ಯಾಪಕರ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜೆ.ಎನ್. ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ. ಎನ್.ಎಸ್.ಮಹಾಂತಶೆಟ್ಟಿ ಹೇಳಿದರು.
ಕಾಹೆರ್‌ನ ಜೆಎನ್‌ಎಂಸಿ ವೈದ್ಯಕೀಯ ಕಾಲೇಜು ಆಯೋಜಿರುವ ಎರಡು ದಿನಗಳ ಎನ್‌ಎಂಸಿ ನೋಡಲ್ ಸೆಂಟರ್ ಾರ್ ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ ಕಾರ್ಯಾಗಾರ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಪಠ್ಯಕ್ರಮದ ಕುರಿತಂತೆ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ವೈದ್ಯಕೀಯ ಕಾಲೇಜುಗಳ ಅಧ್ಯಾಪಕರು ಪಾಲ್ಗೊಂಡಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ನೇತ್ರಾವತಿ ಕವಿ, ಡಾ.ಶೈಲಾ ಪಾಚಾಪುರೆ, ಡಾ.ಚೇತನಾ ವಾರದ ಇದ್ದರು.
ಬೋಧನೆ-ಕಲಿಕೆಯ ವಿಧಾನಗಳು ಮತ್ತು ಮೌಲ್ಯಮಾಪನ ತತ್ತ್ವ, ಇತ್ತೀಚಿನ ಎನ್ ಎಂಸಿ ಪ್ರಕಾರ ಪದವಿಪೂರ್ವ ವೈದ್ಯಕೀಯ ಶಿಕ್ಷಣ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು. ಬಿಸಿಎಂಇ ಸಹ ಸಂಚಾಲಕಿ, ಡಾ.ದೀಪ್ತಿ ಕಡೆಅಂಗಡಿ ಸ್ವಾಗತಿಸಿದರು. ್ಯಾಕಲ್ಟಿ ಆ್ ಮೆಡಿಸಿನ್ ಡೀನ್ ಡಾ.ರೂಪ ಬೆಲ್ಲದ, ವೈದ್ಯಕೀಯ ಶಿಕ್ಷಣ ಕೋರ್ಸ್, ಎಂಇಯು ಸಂಯೋಜಕಿ ಡಾ.ಭಾಗ್ಯಶ್ರೀ ಹುನಗುಂದ, ಡಾ.ಶಿಲ್ಪಾ ಭೀಮಳ್ಳಿ, ಜ್ಯೋತಿ ನಾಗಮೋತಿ, ಡಾ.ಸುನೀತಾ ಪಾಟೀಲ, ಡಾ.ಜಯಶೀಲಾ ಬಾಗಿ, ಡಾ.ಶೀತಲ್ ಹರಕುಣಿ, ಡಾ.ಎಸ್.ಕೆ.ಸೈದಾಪುರ ಇದ್ದರು.