ಜಿಲ್ಲೆ

ಕೊಡಗಿನ ಕಿತ್ತಳೆ ಪುನಶ್ಚೇತನಕ್ಕೆ ಚಾಲನೆ

ಮಡಿಕೇರಿ
ತೆರೆಮರೆಗೆ ಸರಿಯುತ್ತಿರುವ ವಿಶಿಷ್ಠ ಸ್ವಾಧದ ಕೊಡಗಿನ ಕಿತ್ತಳೆಗೆ ಪುನಶ್ಚೇತನ ಕೊಡುವ ಮಹತ್ವದ ಕಾರ್ಯಕ್ಕೆ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಸೋಮವಾರ ಚಾಲನೆ ಸಿಕ್ಕಿದೆ. ‘ಹಳದಿಯಿಂದ ಹಸಿರು, ಹಸಿರಿನಿಂದ ಫಸಲು,’ ಎನ್ನುವ ಧ್ಯೇಯ ವಾಕ್ಯದೊಂದಿದೆ ಮೊದಲ ಹಂತದಲ್ಲಿ ಆಯ್ದ 100 ಬೆಳೆಗಾರರಿಗೆ ಕಿತ್ತಳೆ ಕೃಷಿಗೆ ಸಂಬAಧಿಸಿದ ಕೃಷಿ ಪರಿಕರಗಳನ್ನು ವಿತರಣೆ ಮಾಡಲಾಗಿದ್ದು ಇನ್ನು ಮೂರು ವರ್ಷಗಳಲ್ಲಿ ಕೊಡಗಿನ ಕಿತ್ತಳೆ ಗತವೈಭವಕ್ಕೆ ಮರಳುವ ವಿಶ್ವಾಸ ಹೊಂದಲಾಗಿದೆ.
ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದೊಂದಿದೆ ‘ಕೂರ್ಗ್ ಮ್ಯಾಂಡರಿನ್’ ಪುನಶ್ಚೇತನ ಯೋಜನೆ ಅಡಿಯಲ್ಲಿ ಈ ಕಾರ್ಯ ಅನುಷ್ಠಾನಕ್ಕೆ ಬಂದಿದೆ. 2.37 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, 3 ವರ್ಷ ಕಾಲ ಚಾಲ್ತಿಯಲ್ಲಿ ಇರುತ್ತದೆ. ಕಿತ್ತಳೆ ಮಾತ್ರವಲ್ಲದೆ ಅಣಬೆ ಮತ್ತು ಜೇನು ಕೃಷಿಯ ಉತ್ತೇಜನವನ್ನೂ ಯೋಜನೆ ಒಳಗೊಂಡಿದೆ.
ಕಿತ್ತಳೆ ಪುನಶ್ಚೇತನ ಯೋಜನೆಗೆ ಮೊದಲ ವರ್ಷ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಒಳಗೊಂಡAತೆ 100 ರೈತರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕೊಡಗಿನ ರೈತರಿಗೆ ಆದ್ಯತೆ ಕೊಡಲಾಗಿದ್ದು ಶೇ.60 ಅವಕಾಶ ಜಿಲ್ಲೆಗೆ ಮೀಸಲಿಡಲಾಗಿದೆ. ಈ ಯೋಜನೆಯಲ್ಲಿ ಆಯ್ಕೆ ಆಗಿರುವ ಕಿತ್ತಳೆ ಬೆಳೆಗಾರರಿಗೆ ನೇರವಾಗಿ ಯಾವುದೇ ಹಣಕಾಸಿನ ನೆರವು ಇಲ್ಲ. ಆದರೆ ಎಲ್ಲಾ ರೀತಿಯ ತಾಂತ್ರಿಕ ಸಹಕಾರ, ತರಬೇತಿ, ಉಪಕರಣಗಳು, ರಸಗೊಬ್ಬರ, ಜೈವಿಕ ಗೊಬ್ಬರ, ಔಷಧಿಗಳನ್ನು ಉಚಿತವಾಗಿ ಕೊಡಲಾಗುತ್ತಿದೆ.
ಆಯ್ಕೆಯಾದ ಕಿತ್ತಳೆ ಬೆಳೆಗಾರರು ಸೋಮವಾರ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಕ್ಕೆ ಆಗಮಿಸಿ ರಾಸಾಯನಿಕ ಗೊಬ್ಬರ, ಜೈವಿಕ ಗೊಬ್ಬರ, ಬೇವಿನ ಎಣ್ಣೆ, ಗಿಡದ ರೆಂಬೆ ಕತ್ತರಿಸುವ ಕತ್ತರಿ, ಗುದ್ದಲಿ ಸೇರಿದಂತೆ ಕಿತ್ತಳೆ ಕೃಷಿಗೆ ಸಂಬAಧಿಸಿದ ಕೃಷಿ ಪರಿಕರಗಳನ್ನು ಪಡೆದುಕೊಂಡರು. ಕಿತ್ತಳೆ ಗಿಡದ ಆರೈಕೆ, ಕೀಟ ನಿರ್ವಹಣೆಗೆ ಸಂಬAಧಿಸಿದAತೆ ದಿನಪೂರ್ತಿ ನಡೆದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.
ಈಗಾಗಲೇ ಕಿತ್ತಳೆ ತೋಟ ಇರುವ ರೈತರನ್ನು ಗುರುತಿಸಿ ಯೋಜನೆಯ ಮೊದಲ ಹಂತಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇವರೆಲ್ಲಾ ಕೇಂದ್ರದ ವಿಜ್ಞಾನಿಗಳು ಸಲಹೆ ಪ್ರಕಾರವೇ ಗೊಬ್ಬರ, ಔಷಧಿ, ನೀರು ಮತ್ತಿತರ ಆರೈಕೆಗಳನ್ನು ಮಾಡಿಕೊಂಡು ಗಿಡಗಳನ್ನು ಬೆಳೆಸಬೇಕಾಗುತ್ತದೆ. ಕೊಡಗಿನ ಕಿತ್ತಳೆ ಅವಸಾನ ಮುಟ್ಟಲು ಹಳದಿ ರೋಗ ಕಾರಣವಾಗಿದ್ದು, ಈ ರೋಗದ ವಿರುದ್ಧ ಗರಿಷ್ಠ ಎಚ್ಚರಿಕೆಗಳನ್ನು ಪಾಲಿಸಲಾಗುತ್ತದೆ. 2ನೇ ಹಂತದಲ್ಲಿ ಮತ್ತೆ 100 ರೈತರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಕೇಂದ್ರದಿAದಲೇ ಗಿಡಗಳನ್ನು ಕೊಟ್ಟು ರೋಗರಹಿತ ಕಿತ್ತಳೆ ತೋಟ ರೂಪಿಸಲು ಯೋಜನೆ ಸಿದ್ಧಪಡಿಸಲಾಗಿದೆ.
‘ಕೂರ್ಗ್ ಮ್ಯಾಂಡರಿನ್’ ಪುನಶ್ಚೇತನ ಯೋಜನೆ ಅಡಿಯಲ್ಲಿ ಜೇನು ಕೃಷಿಯನ್ನೂ ಸೇರಿಸಲಾಗಿದೆ. ಜೇನು ಉತ್ಪಾದನೆಯಲ್ಲಿ ಆಸಕ್ತಿ ಇರುವ ಜಿಲ್ಲೆಯ 50 ಜನರನ್ನು ಈಗಾಗಲೇ ಗುರುತಿಸಲಾಗಿದ್ದು, ಮೊದಲ ವರ್ಷ ಒಟ್ಟು 100 ಜೇನು ಪಟ್ಟಿಗೆಗಳನ್ನು ಹುಳುಗಳೊಂದಿಗೆ ಕೊಡಲಾಗುತ್ತದೆ. ಇವರಿಗೆಲ್ಲಾ ಜೇನು ಕೃಷಿಗೆ ಪೂರಕ ಉಪಕರಣಗಳನ್ನೂ ಉಚಿತವಾಗಿ ಒದಗಿಸಲಾಗುತ್ತದೆ. ಇದಕ್ಕಾಗಿ 3 ದಿನದ ತರಬೇತಿಯನ್ನೂ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಕೊಡಲು ನಿರ್ಧರಿಸಲಾಗಿದೆ.
ಅಣಬೆ ಕೃಷಿ ತರಬೇತಿ ಕೂಡ ಈ ಯೋಜನೆಯಲ್ಲಿ ಸೇರಿದೆ. ಅಣಬೆ ಬೆಳೆಯುವುದಕ್ಕೆ ಬೇಕಾದ ತರಬೇತಿಯನ್ನು ಹಂತ ಹಂತವಾಗಿ ಕೊಡುವುದಲ್ಲದೆ ಉಚಿತ ಬೀಜ ಕೂಡ ಒದಗಿಸಲಾಗುತ್ತದೆ. ಈ ಯೋಜನೆಗೂ 100 ಜನ ಆಸಕ್ತ ರೈತರನ್ನು ಗುರುತಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೂ ಕೇಂದ್ರ ವತಿಯಿಂದ ತರಬೇತಿ ಕೊಡಲಾಗುತ್ತದೆ.

ಕೊಡಗಿನ ಕಿತ್ತಳೆ ಪುನಶ್ಚೇತನಕ್ಕೆ ಸಂಬAಧಿಸಿದAತೆ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಅದ್ಭುತವಾದ ಯೋಜನೆ ರೂಪಿಸಿದೆ. ಈ ಯೋಜನೆ ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆ ಅವನತಿಯ ಅಂಚಿನಲ್ಲಿರುವ ಕೊಡಗಿನ ಕಿತ್ತಳೆಗೆ ಮತ್ತೆ ವೈಭವದ ದಿನಗಳು ಬರಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಯೋಜನೆಗೆ ಆಯ್ಕೆ ಆಗಿರುವ ಬೆಳೆಗಾರರ ಪಾತ್ರವೂ ಇದರಲ್ಲಿ ಪ್ರಮುಖವಾಗಿದೆ. ಕೇಂದ್ರ ಕೂಡ ಫಾಲೋ ಅಪ್ ಮಾಡುತ್ತಿರಬೇಕು.
ಬೋಸ್ ಮಂದಣ್ಣ, ಪ್ರಗತಿಪರ ಕಾಫಿ ಬೆಳೆಗಾರ

ಕೊಡಗಿನ ವಿಶಿಷ್ಟ ಸ್ವಾಧ ಮತ್ತು ಗುಣದ ಕಿತ್ತಳೆ ಬೇರೆ ಎಲ್ಲಿ ಕೂಡ ಬೆಳೆಯಲು ಸಾಧ್ಯವೇ ಇಲ್ಲ. ಭೌಗೋಳಿಕ ಸೂಚಕದ ಮಾನ್ಯತೆ ಹೊಂದಿರುವ ಕೊಡಗಿನ ಕಿತ್ತಳೆಗೆ ಮತ್ತೆ ಗತ ವೈಭವ ಮರಳಬೇಕಿದೆ. ಈ ನಿಟ್ಟಿನಲ್ಲಿ 2.37 ಕೋಟಿ ರೂ. ಮೊತ್ತದ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಪಶ್ಚಿಮಘಟ್ಟದ ರೈತರ ಆದಾಯ ಹೆಚ್ಚಿಸುವ ಮೂಲಕ ಅವರ ಸಾಮಾಜಿಕ ಜೀವನ ಉತ್ತಮಪಡಿಸುವದು ಈ ಯೋಜನೆಯ ಉದ್ದೇಶಗಳಲ್ಲಿ ಸೇರಿದೆ.
ಡಾ. ಬಿ.ಎಂ ಮುರಳೀಧರ್, ಹಣ್ಣು ವಿಜ್ಞಾನಿ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿ.

ಜೇನು ಮತ್ತು ಅಣಬೆ ಕೃಷಿ ಸೇರಿದಂತೆ ‘ಕೂರ್ಗ್ ಮ್ಯಾಂಡರಿನ್’ ಪುನಶ್ಚೇತನ ಯೋಜನೆ ರೂಪುಗೊಂಡಿದೆ. ಈ ಮೂರು ಬೆಳೆಗಳಿಗೆ ಸಂಬAಧಿಸಿದAತೆ ಆಸಕ್ತ ರೈತರನ್ನು ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಇವರಿಗೆ ತಾಂತ್ರಿಕ ನೆರವು ಸೇರಿದಂತೆ ಎಲ್ಲಾ ಸಹಕಾರ ನಮ್ಮ ಕಡೆಯಿಂದ ಕೊಡಲಾಗುತ್ತದೆ.
ಡಾ. ಎ.ಟಿ. ರಾಣಿ, ಕೀಟ ವಿಜ್ಞಾನಿ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರ, ಚೆಟ್ಟಳ್ಳಿ