ಜಿಲ್ಲೆ

ಕೊಡಗಿನ ಕಿತ್ತಳೆ ಪುನಶ್ಚೇತನಕ್ಕೆ ಚಾಲನೆ

ಮಡಿಕೇರಿ:

ವಿಶಿಷ್ಟ ಸ್ವಾಧ ಹೊಂದಿರುವ ಕೊಡಗಿನ ಕಿತ್ತಳೆ ಹೆಚ್ಚು ಹೆಚ್ಚು ಬೆಳೆಯುವುದರ ಜತೆಗೆ ಈ ಹಣ್ಣಿಗೆ ಸ್ವಂತದ್ದೊAದು ಬ್ರಾಂಡ್ ಸೃಷ್ಟಿಸಿಕೊಂಡು ವಿದೇಶದಲ್ಲೂ ಮಾರುಕಟ್ಟೆ ಕಂಡುಕೊಳ್ಳುವAತಾಗಬೇಕು ಎಂದು ಭಾರತೀಯ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಟಿ.ಕೆ. ಬೆಹ್ರಾ ಅಭಿಪ್ರಾಯಪಟ್ಟರು. ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಸೋಮವಾರ ನಡೆದ ಕೊಡಗಿನ ಕಿತ್ತಳೆ ಪುನಶ್ಚೇತನ ಮತ್ತು ಕೃಷಿ ಪರಿಕರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಡಗು ಎಂದ ಕೂಡಲೇ ಕೂರ್ಗ್ ಹನಿ ಡ್ಯೂ ಪಪ್ಪಾಯಿ, ಕೊಡಗಿನ ಜೇನು ಹಾಗೂ ಕೊಡಗಿನ ಕಿತ್ತಳೆ ನೆನಪಿಗೆ ಬರುತ್ತದೆ. ಜಿಐ ಮಾನ್ಯತೆ ಪಡೆದುಕೊಂಡಿರುವ ಕೊಡಗಿನ ಕಿತ್ತಳೆ ಅವನತಿಯ ಅಂಚಿನಲ್ಲಿರುವುದು ಆತಂಕದ ವಿಷಯ. ಇದಕ್ಕೆ ಪುನಶ್ಚೇತನ ನೀಡುವಲ್ಲಿ ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ವಿಶೇಷ ಪ್ರಯತ್ನ ಮಾಡುತ್ತಿದೆ. ಇದೇ ರೀತಿಯಲ್ಲಿ ವಿದೇಶಿ ಹಣ್ಣುಗಳನ್ನು ಬೆಳಸಲು ಕೊಡಗಿನ ಹವಾಮಾನ ಸೂಕ್ತವಾಗಿದ್ದು, ಈ ನಿಟ್ಟಿನಲ್ಲೂ ಈ ಕೇಂದ್ರದಲ್ಲಿ ಪ್ರಯೋಗಗಳು ನಡೆಯಬೇಕು. ಹಾಗಾಗಿ ಇಲ್ಲಿಗೆ ಹೆಚ್ಚಿನ ಸಿಬ್ಬಂದಿ ನೀಡಲಾಗುವುದು. ಜೀನ್ ಬ್ಯಾಂಕ್ ಸ್ಥಾಪಿಸುವ ಯೋಚನೆಯೂ ಇದೆ ಎಂದರು.

ರಾಸಾಯನಿಕ ಮುಕ್ತ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ರೈತರು ಗಮನಹರಿಸಬೇಕು. ತಮ್ಮ ಬೆಳೆಗಳಿಗೆ ಸ್ವಂತ ಬ್ರಾಂಡ್ ನಿರ್ಮಿಸಿಕೊಂಡು ಮಾರುಕಟ್ಟೆಗೆ ಬರಬೇಕು. ಇದಕ್ಕೆ ಕಿತ್ತಳೆ ಬೆಳೆಗಾರರ ಸಹಕಾರ ಸಂಘಗಳAಥ ಸಂಸ್ಥೆಗಳು ಸಹಕರಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಜಂಟಿ ನಿರ್ದೇಶಕಿ ದೀಪಜಾ ಎಸ್.ಎಂ. ಮಾತನಾಡಿ ಕೊಡಗಿನ ಕಿತ್ತಳೆ ಮುನಶ್ಚೇತನದ ಪ್ರಥಮ ಹೆಜ್ಜೆ ಶುರುವಾಗಿದೆ. ಲಾಭದಾಯಕ ಕೃಷಿ ಮಾಡುವುದೇ ದೊಡ್ಡ ಸವಾಲು. ಇದನ್ನು ಎದುರಿಸಬೇಕು. ಇದಕ್ಕೆ ಸಹಕಾರ ಸಂಘಗಳು ಮುಂದೆ ಬರಬೇಕು. ಬ್ರಾಂಡಿAಗ್, ಮಾರುಕಟ್ಟೆ ವಿಸ್ತರಿಸಲು ಸಹಕರಿಸಬೇಕು. ಕಿತ್ತಳೆಯ ಬೆಲೆ ಹೆಚ್ಚಳ ಆದರೆ ಈ ಹಣ್ಣಿನ ಕೃಷಿ ಬಗ್ಗೆ ಆಸಕ್ತಿ ಬರುತ್ತದೆ ಎಂದರು.
ರಾಷ್ಟ್ಟೀಯ ಕೃಷಿ ವಿಕಾಸ ಯೋಜನೆ ನೋಡಲ್ ಅಧಿಕಾರಿ ಡಾ. ಕೆ.ವಿ. ರವಿಶಂಕರ್ ಮಾತನಾಡಿ
ಕೊಡಗಿನ ಜೇನು, ಕೊಡಗಿನ ಕಿತ್ತಳೆಯ ವಿಶೇಷತೆ ಬಗ್ಗೆ ಹೆಮ್ಮೆ ಇದೆ. ಜೇನು ಸಿಗುತ್ತಿಯಾದರೂ ಕೊಡಗಿನ ಕಿತ್ತಳೆ ಲಭ್ಯವಿಲ್ಲ. ಜಿಐ ಟ್ಯಾಗ್ ಇದ್ದರೂ ವಾಣಿಜ್ಯಿಕವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ವೈಜ್ಞಾನಿಕ ಬೆಳೆ, ಬ್ರಾಂಡಿAಗ್ ಆಗುತ್ತಿಲ್ಲ. ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ಕೊಡುವ ಮೂಲಕ ಉತ್ತಮ ಬೆಲೆ ಪಡೆಯುವಂತಾಗಬೇಕು. ಕೊಡಗಿನ ಕಿತ್ತಳೆ ರಫ್ತು ಮಾಡಲು ಹೆಚ್ಚಿನ ಅವಕಾಶ ಇದೆ ಎಂದು ಹೇಳಿದರು.

ಸೋಮವಾರಪೇಟೆ ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ಉಪನಿರ್ದೇಶಕಿ ಲಿಖಿತಾ ರಾಜ್ ಮಾತನಾಡಿ ತೋಟಗಾರಿಕೆ ಇಲಾಖೆಯಿಂದ 125 ಹೆಕ್ಟೇರ್ ಪ್ರದೇಶದಲ್ಲಿ ಕಿತ್ತಳೆ ಬೆಳೆ ಪುನಶ್ಚೇತನ ಗುರಿ ಹೊಂದಲಾಗಿದೆ. ಆದರೆ ಕಾಳು ಮೆಣಸು ಬೆಳೆಯಲು ತೋರಿಸಿದಷ್ಟು ಆಸಕ್ತಿ ಕಿತ್ತಳೆ ಬೆಳೆಯಲು ಕಂಡುಬರುತ್ತಿಲ್ಲ. ತೋಟಗಾರಿಕೆ ಇಲಾಖೆ ಸವಲತ್ತುಗಳನ್ನು ಬೆಳೆಗಾರರು ಬಳಸಿಕೊಳ್ಳಬೇಕು ಎಂದರು.

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದ ಹಣ್ಣು ವಿಜ್ಞಾನಿ ಡಾ. ಬಿ.ಎಂ ಮುರಳೀಧರ್ ಮಾತನಾಡಿ 60 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಕೊಡಗಿನ ಕಿತ್ತಳೆ ಈಗ
4-5 ಸಾವಿರ ಎಕರೆಗೆ ಇಳಿದಿದೆ. ಆದರೆ ಇದರಲ್ಲಿ ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿ ಮಾತ್ರ ಆರೋಗ್ಯಕರ ಗಿಡಗಳನ್ನು ಕಾಣಬಹುದು ಎಂದು ಹೇಳಿದರು.

ಕಿತ್ತಳೆ ಬೆಳೆಯ ಅನುಭವ ಹಂಚಿಕೊAಡ ಪ್ರಗತಿಪರ ಕೃಷಿಕ ಪ್ರಮೋದ್ ರೈ ಹವಾಮಾನ ಮತ್ತಿತರ ಕಾರಣಗಳಿಗೆ ಬೆಳೆ ಪದ್ಧತಿ ಈಗ ಬದಲಾಗಿದೆ. ಇಂದಿನ ದಿನಗಳಲ್ಲಿ ವಿಜ್ಞಾನಿಗಳ ಸಲಹೆ ಅಗತ್ಯ. ಕಿತ್ತಳೆಗೆ ವೈರಸ್ ಹಾವಳಿ ಸಂಪೂರ್ಣ ತಡೆಗಟ್ಟಲು ಆಗುವುದಿಲ್ಲ. ಆದರೆ ಹತೋಟಿಯಲ್ಲಿ ಇಡಬಹುದು ಎಂದು ಹೇಳಿದರು.
ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ ಹಣ್ಣಿನ ವಿಭಾಗದ ಮುಖ್ಯಸ್ಥ ಡಾ. ಶಂಕರನ್ ಎಂ., ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದ ನಿರ್ದೇಶಕ ಡಾ. ರಾಜೀಂದ್ರನ್ ಎಸ್. ಕೇಂದ್ರದ ಕೀಟ ವಿಜ್ಞಾನಿ ಡಾ. ರಾಣಿ, ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸಿ.ಜಿ. ಕುಶಾಲಪ್ಪ, ಪ್ರಗತಿಪರ ಕೃಷಿಕ ಬೋಸ್ ಮಂದಣ್ಣ ಮತ್ತಿತರರು ಇದ್ದರು.