ಜಿಲ್ಲೆ

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Mysuru

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಭಾನುವಾರ ಚಾಲನೆ ನೀಡಿದರು.
ಲೋಕೋಪಯೋಗಿ ಇಲಾಖೆಯ ಎಸ್‌ಎಫ್‌ಸಿ ವಿಶೇಷ ಅನುದಾನದ 4.50 ಕೋಟಿ ರೂ. ವೆಚ್ಚದಲ್ಲಿ ವಾರ್ಡ್ ನಂ-18ರ ವ್ಯಾಪ್ತಿಯ ಕೆಆರ್‌ಎಸ್ ರಸ್ತೆ (ಮೈಸೂರು-ಬೆಳಗೊಳ ರಸ್ತೆ), ಜಾವಾ ಫ್ಯಾಕ್ಟರಿ ರಸ್ತೆ (ಹೈವೇ ಸರ್ಕಲ್ ಅಂಡರ್ ಪಾಸ್‌ನಿಂದ ಮಂಜುನಾಥಪುರದವರೆಗೆ) ಒಂಟಿಕೊಪ್ಪಲು ವೆಂಕಟರಮಣ ಸ್ವಾಮಿ ದೇವಸ್ಥಾನದ ಸಿಗ್ನಲ್ ನಿಂದ ರಾಮಕೃಷ್ಣ ಆಶ್ರಮ ಶಾಲೆ ಮೂಲಕ ರಾಮಣ್ಣ ವೃತ್ತ ಸೇರುವ ರಸ್ತೆ, ಯಾದವಗಿರಿ ಚರ್ಚ್ ರಸ್ತೆ ಹಾಗೂ ಇತರ ಅಡ್ಡ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.


ಪಾಲಿಕೆ ಸದಸ್ಯರಾದ ಬಿ.ವಿ.ರವೀಂದ್ರ, ಚಿಕ್ಕವೆಂಕಟ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜು, ಸಹಾಯಕ ಇಂಜಿನಿಯರ್ ಜಗದೀಶ ಮೂರ್ತಿ, ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರರಾಜು, ಮುಖಂಡರಾದ ಎಸ್.ಕೆ.ದಿನೇಶ್, ಕುಮಾರ್ ಗೌಡ, ಕಿರಣ ಬೋಳಾರ್, ಗುರುವಿನಾಯಕ್, ಮಹೇಶ್, ಕೇಬಲ್ ನಾಗೇಶ್ ಇತರರಿದ್ದರು.