ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ದುರಸ್ತಿ ಮಾಡಿ ಕಾರ್ಯಾರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ಗೆ ಮನವಿ ಸಲ್ಲಿಸಿದರು. ಶಿವಾಜಿರಾವ ಸುಂಟಕರ, ನಾಗೇಶ ಸಾತೇರಿ, ಸಂಜಯ ಪ್ರಭು, ಅಪ್ಪಾ ಜಾಧವ, ಅಪ್ಪಾ ಜಾಧವ ಇದ್ದರು. 
ಜಿಲ್ಲೆ

ಕುಡಿಯುವ ನೀರಿನ ಘಟಕ ದುರಸ್ತಿಯಾಗಲಿ

ಶಂಕರ ಗೆಜ್ಜಿ

ಬೆಳಗಾವಿ: ನೀರಿನ ಶುದ್ಧೀಕರಣ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಘಟಕಗಳನ್ನು ದುರಸ್ತಿ ಮಾಡಿ ಕಾರ್ಯಾರಂಭಿಸುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಬುಧವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಒಂದು ತಿಂಗಳಿಂದ ಅತಿಯಾಗಿ ಮಳೆ ಸುರಿದ ಕಾರಣ ಹಿಡಕಲ್, ರಕ್ಕಸಕೊಪ್ಪ ಹಾಗೂ ಮಾರ್ಕಂಡೇಯ ಜಲಾಶಯ ತುಂಬಿ ಅವುಗಳ ವ್ಯಾಪ್ತಿಯ ನೀರಿನ ಶುದ್ಧೀಕರಣ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಗಮನಹರಿಸುತ್ತಿಲ್ಲ. ಇದರಿಂದ ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮನೆಗಳಿಗೆ ಸರಬರಾಜಾಗುವ ಕುಡಿಯುವ ನೀರು ಸಂಪೂರ್ಣ ಕಲುಷಿತವಾಗಿ ಪೂರೈಕೆಯಾಗುತ್ತದೆ.

ಸಾರ್ವಜನಿಕರು, ಮಕ್ಕಳು ಕಲುಷಿತ ನೀರಿನ ಸೇವನೆಯಿಂದ ಅಸ್ವಸ್ಥರಾಗಿ ಕಾಮಾಲೆ, ಇನ್ನಿತರ ರೋಗಗಳಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಬೆಳಗಾವಿ ನಗರದ ಎಲ್ ಆ್ಯಂಡ್ ಟಿ ಹಾಗೂ ಗ್ರಾಮೀಣ ಭಾಗದ ಗ್ರಾಮೀಣ ನೀರು ಸರಬರಾಜು ಯೋಜನೆ ಬೆಳಗಾವಿ ಅಧಿಕಾರಿಗಳು, ಮಹಾಪೌರರು, ಉಪ ಮಹಾಪೌರರು, ನಗರ ಸೇವಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರ ಸಭೆ ಕರೆದು, ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಜರುಗಿಸುವುದಾಗಿ ತಿಳಿಸಿದರು. ಮಾಜಿ ಮಹಾಪೌರ ಶಿವಾಜಿರಾವ ಸುಂಟಕರ, ಮಾಜಿ ಮಹಾಪೌರ ನಾಗೇಶ ಸಾತೇರಿ, ಮಾಜಿ ನಗರ ಸೇವಕ ಸಂಜಯ ಪ್ರಭು, ಮಾಜಿ ಎಪಿಎಂಸಿ ಅಧ್ಯಕ್ಷ ಅಪ್ಪಾ ಜಾಧವ, ವಕೀಲರಾದ ಅಪ್ಪಾ ಜಾಧವ, ಪುಂಡಲೀಕ ಪಾವಶೆ ಇತರರಿದ್ದರು.