ಮುದಗಲ್: ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದ್ದು, ನಿವಾರಿಸಬೇಕೆಂದು ಒತ್ತಾಯಿಸಿ ಲಿಂಗಸುಗೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ಗೆ ಭಾನುವಾರ ಮುದಗಲ್‌ನ ನಾಗರಿಕರ ವೇದಿಕೆ ಮನವಿ ಸಲ್ಲಿಸಿತು.
ಪಟ್ಟಣದಲ್ಲಿ ನಿರಂತರ ಕುಡಿವ ನೀರಿನ ಯೋಜನೆ ಕಾಮಗಾರಿ ಸ್ಥಗಿತದ ಕುರಿತು ಇತ್ತೀಚೆಗೆ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪುರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರನ್ನು ಭೇಟಿಯಾಗಿ ಅಂದಾಜು ಪತ್ರಿಕೆ ಮೂಲಕ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲಾಗಿತ್ತು.
ಮುದಗಲ್ ಕುಡಿವ ನೀರಿನ ಯೋಜನೆಗಾಗಿ ಬಾಕಿ ಅನುದಾನ 44.79 ಕೋಟಿ ರೂ. ಮೊತ್ತದ ಅಂದಾಜು ಪತ್ರಿಕೆ ಸಲ್ಲಿಸಿ ಟೆಂಡರ್ ಪ್ರಕ್ರಿಯೆಗಾಗಿ ಹಣಕಾಸು ನೆರವು ಕೋರಿದ್ದು, ಕೂಡಲೇ ಸಚಿವ ಸಂಪುಟದಲ್ಲಿ ಅನುಮೋದಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗುವಂತೆ ಸಚಿವರಿಗೆ ಮನವಿ ಮಾಡಿದರು. ವೇದಿಕೆ ಸದಸ್ಯರಾದ ರಾಜು ಮಾಲಿಪಾಟೀಲ್, ಜೋಸೆಫ್ ಈರ್ಲಾ, ಮೈಬೂಬ್ ಬಾರಿಗಿಡ, ಅನಿಲ್‌ಕುಮಾರ್ ಬುಶೆಟ್ಟಿ, ಕೇಶವರೆಡ್ಡಿ ಯರದಿಹಾಳ, ತಿಮ್ಮನಗೌಡ ಇದ್ದರು.