ಜಿಲ್ಲೆ

ಕುಡಿಯುವ ನೀರಿಗೆ ಹಾಹಾಕಾರ

ವಿನಯ ಹೆಗಡೆ

ಮುಂಡಗೋಡ: ಮಳೆಗಾಲ ಆರಂಭವಾಗಿ ತಿಂಗಳು ಗತಿಸುತ್ತಾ ಬಂದರು ಸಹ ತಾಲೂಕಿನಲ್ಲಿ ಉತ್ತಮ ಮಳೆಯಾಗದ ಕಾರಣ ಅಂತರ್ಜಲ ಪಾತಾಳ ಕಂಡಿದ್ದು, ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.

ಪ್ರತಿವರ್ಷವೂ ಈ ವೇಳೆಗೆ ಉತ್ತಮ ಮಳೆ ಸುರಿಯುತ್ತಿತ್ತು. ಆದರೆ ಈ ವರ್ಷ ಎರಡು ಬಾರಿ ಮಾತ್ರ ಸಾಧಾರಣ ಮಳೆ ಸುರಿದಿರುವ ಪರಿಣಾಮ ಅಂತರ್ಜಲ ಕುಸಿತಕಂಡಿದೆ.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಗೂ ಗದ್ದೆಗಳಲ್ಲಿನ ಬೆಳೆಗಳ ರಕ್ಷಣೆಗಾಗಿ ನೀರಿಲ್ಲದೆ ಜನರು ಪರದಾಡುವಂತಾಗಿದೆ.


ಅಂತರ್ಜಲ ಕುಸಿತದಿಂದ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗದೆ ತಾಲೂಕಿನ ಕ್ಯಾಸನಕೇರಿ, ಚವಡಳ್ಳಿ, ಮಲಬಾರಕಾಲೋನಿ, ಹಳೆಅರಶಿಣಗೇರಿ ಗ್ರಾಮಗಳಿಗೆ ಪ್ರತಿದಿನವೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಖಾಸಗಿ ಬೋರ್‌ವೆಲ್: ತಾಲೂಕಿನ ಚವಡಳ್ಳಿ, ಮಲವಳ್ಳಿ, ಲಕ್ಕೋಳ್ಳಿ, ತಮ್ಯಾನಕೋಪ್ಪ, ಬ್ಯಾನಳ್ಳಿ, ಕಾವಲಕೋಪ್ಪ, ಗಣೇಶಪುರ, ಹೊಸಸಾಲಗಾಂವ, ಹೊಸಕೊಪ್ಪ, ಶಿಡ್ಲಗುಂಡಿ, ಕರಗಿನಕೋಪ್ಪ, ಮೈನಳ್ಳಿ, ಓರಲಗಿ, ನಂದಿಗಟ್ಟ, ಹುಲಿಹೊಂಡ, ಕೆಂದಲಗೇರಿ ಗ್ರಾಮಗಳಲ್ಲಿ ಖಾಸಗಿ ಬೋರವೇಲ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.

ಇದೆ ರೀತಿಯಗಿ ಮಳೆಯಾಗದೆ ಹೊದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.

ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಉತ್ತಮ ಮಳೆಯಾದರೆ ಅಂತರ್ಜಲ ಮಟ್ಟ ಹೆಚ್ಚಾಗಿ ನೀರು ಪೂರೈಕೆಗೆ ಅನುಕೂಲವಾಗುತ್ತದೆ. ಸಧ್ಯ ಕೆಲವಡೆ ಖಾಸಗಿ ಬೋರ್‌ವೆಲ್‌ಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ.ಪ್ರದೀಪ ಭಟ್ ಇಂಜಿನಿಯರ್ ಪಂಚಾಯತ್ ರಾಜ್ ಇಲಾಖೆ.