ಜಿಲ್ಲೆ

ಹುಬ್ಬಳ್ಳಿ ಧಾರವಾಡ ಕುಡಿಯುವ ನೀರಿನ ಸಮಸ್ಯೆ, ಎಲ್ ಆ್ಯಂಡ್ ಟಿ ವಿರುದ್ಧ ತೀವ್ರ ಆಕ್ರೋಶ

Dharwada - Basavaraj Idli

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ನೀರು ಪೂರೈಸುವ ಹೊಣೆ ಹೊತ್ತಿರುವ ಎಲ್ ಆ್ಯಂಡ್ ಕಂಪನಿ ವಿರುದ್ಧ ಪಾಲಿಕೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಸದಸ್ಯರು ಪಕ್ಷ ಭೇದ ಮರೆತು ಆಕ್ರೋಶ ಹೊರಹಾಕಿದರು.

ಕೆಲವೆಡೆ ಹತ್ತು ದಿನಕ್ಕೊಮ್ಮೆ ನೀರು ಬರುತ್ತಿದೆ. ಎರಡು ವರ್ಷದಿಂದ ಈ ಸಮಸ್ಯೆ ಇದ್ದರೂ ಪರಿಹಾರ ಇಲ್ಲ.

ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಕಂಪನಿಯನ್ನು ಜವಾಬ್ದಾರಿಯಿಂದ ಕಿತ್ತು ಹಾಕಿ ಹೊಸ ವ್ಯವಸ್ಥೆ ಜಾರಿ ಮಾಡಿ ಎಂದು ಆಗ್ರಹ.

ಮೇಯರ್ ವೀಣಾ ಬರದ್ವಾಡ. ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ. ಶಿವು ಹಿರೇಮಠ. ಪ್ರತಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ ಇತರರು ಭಾಗಿ.