ಚಿಕ್ಕೋಡಿ: ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳ ಗುರಿ ಮತ್ತು ಕನಸು ಸಾಕಾರಗೊಳ್ಳಲು ಸಾಧ್ಯ ಎಂದು ಸಾಹಿತಿ
ಡಾ.ಬಾಳಾಸಾಹೇಬ ಲೋಕಾಪುರ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 2025& 26ನೇ ಸಾಲಿನ ಕ್ರೀಡಾ ಹಾಗೂ ಸಾಂಸತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ನಕಾರಾತ್ಮಕ ವಿಚಾರ ಬಿಟ್ಟು ಧನಾತ್ಮಕ ಯೋಚನೆ ಯಾವಾಗಲೂ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದಟಛಿತೆ ನಿರಂತರವಾಗಿರಲಿ ಎಂದರು.
ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಎನ್.ಎಸ್. ವಂಟಮುತ್ತೆ ಮಾತನಾಡಿದರು. ಅಧ್ಯತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ
ಡಾ.ಬಿ.ಜಿ.ಕುಲಕರ್ಣಿ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂಟನಾತ್ಮಕ ಕೌಶಲ ಬೆಳೆಸುತ್ತದೆ. ಸೋಲು ಮತ್ತು ಗೆಲುವು
ಸಮಾಂತರವಾಗಿ ಸ್ವೀಕರಿಸಬೇಕು ಎಂದು ಹೇಳಿದರು. ದೈಹಿಕ ನಿರ್ದೇಶಕ ಪ್ರೊ.ಪ್ರವಿಣ ವಾ್ಮೂರೆ, ಪ್ರೊ.ರಾಜೇಶ ನಾಯ್ಕ ಇತರರಿದ್ದರು. ಪ್ರೊ.ಎಂ.ಆರ್.ಛಾಯಾ ಸ್ವಾಗತಿಸಿದರು. ಪ್ರೊ.ಪದ್ಮಶ್ರೀ ಚೌಗಲಾ ನಿರೂಪಿಸಿದರು.