ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಉತ್ತಮ ವೃತ್ತಿ ಜೀವನ ರೂಪಿಸಿಕೊಳ್ಳಲು ಕನಸು ಮತ್ತು ಗಮನ ಮುಖ್ಯ ಎಂದು ಧಾರವಾಡ ಐಐಟಿ ಪ್ಲೇಸ್ವೆುಂಟ್ ಅಧಿಕಾರಿ ಡಾ. ಜಯಂತಿ ಬೇಲೂರ ಹೇಳಿದರು.
ಇಲ್ಲಿಯ ಗೋಕುಲ ರಸ್ತೆಯ ಬ್ರೖೆಟ್ ಬಿಜಿನೆಸ್ ಸ್ಕೂಲ್ನಲ್ಲಿ ಬೆಂಗಳೂರಿನ ಸ್ಟೋರ್ ಕಿಂಗ್ ಆಯೋಜಿಸಿದ್ದ ಪೂಲ್ ಕ್ಯಾಂಪಸ್ ಡ್ರೖೆವ್ ಉದ್ಘಾಟಿಸಿ ಮಾತನಾಡಿದ ಅವರು, ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬರೂ ಉತ್ತಮ ಮನೋಭಾವ ಹೊಂದಿರಬೇಕು ಹಾಗೂ ವೃತ್ತಿಪರರಾಗಿರಬೇಕು ಎಂದರು.
ಬ್ರೖೆಟ್ ಬಿಜಿನೆಸ್ ಸ್ಕೂಲ್ ನಿರ್ದೇಶಕ ಡಾ. ಪ್ರಸಾದ ರೂಡಗಿ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಕೆ ಜತೆ ಕಾರ್ಯಕ್ಷಮತೆಯ ಮೇಲೆ ಗಮನ ಕೇಂದ್ರೀಕರಿಸಬೇಕು. ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು. ಹುಬ್ಬಳ್ಳಿಯಲ್ಲಿ ಬ್ರೖೆಟ್ ಬಿಜಿನೆಸ್ ಸ್ಕೂಲ್ ಪ್ರಾರಂಭಿಸುವ ಮುಖ್ಯ ಉದ್ದೇಶವು ಪ್ರಾಯೋಗಿಕ ಮತ್ತು ಅನುಭವದ ಕಲಿಕೆಯಾಗಿದೆ ಎಂದು ಹೇಳಿದರು.
ಡಾ. ರಾಕೇಶ ರಾಜೀವ್ ಮಾತನಾಡಿ, ಮೂರು ಸುತ್ತುಗಳಲ್ಲಿ 28 ವಿದ್ಯಾರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಇವರು ಮುಂದಿನ ವಾರ ಬೆಂಗಳೂರಿನಲ್ಲಿ ಅಂತಿಮ ಸಂದರ್ಶನಕ್ಕೆ ಹಾಜರಾಗುತ್ತಾರೆ ಎಂದು ತಿಳಿಸಿದರು. ಬ್ರೖೆಟ್ ಬಿಜಿನೆಸ್ ಸ್ಕೂಲ್ ಪ್ಲೇಸ್ವೆುಂಟ್ ಅಧಿಕಾರಿ ಯೋಗೇಶ ವಂದಿಸಿದರು. ಸೃಷ್ಟಿ ದೇಶಪಾಂಡೆ ನಿರೂಪಿಸಿದರು. ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಮತ್ತು ಗದಗ ನಗರಗಳಿಂದ ಸುಮಾರು 120 ಎಂಬಿಎ ವಿದ್ಯಾರ್ಥಿಗಳು ಹಾಜರಾಗಿದ್ದರು.