ಜಿಲ್ಲೆ

ಮೌಲ್ಯಯುತ ಭವಿಷ್ಯದ ಕನಸು ಕಾಣಿರಿ

ಅವಿನಾಶ್ ಜೈನಹಳ್ಳಿ

ಮೈಸೂರು: ಭವಿಷ್ಯದ ಪರಿಜ್ಞಾನ ಇಲ್ಲದಿದ್ದರೆ ಅಜ್ಞಾನವಾಗುತ್ತದೆ. ಆದ್ದರಿಂದ ಎಲ್ಲರೂ ಮೌಲ್ಯಯುತ ಭವಿಷ್ಯದ ಬಗ್ಗೆ ಕನಸು ಕಾಣಬೇಕು ಎಂದು ರಂಗಕರ್ಮಿ ಎಚ್.ಜನಾರ್ದನ್ ಹೇಳಿದರು.

ಶ್ರೀ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಬಿ.ಇಡಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಯಾವ ಜಾತಿಯೂ ಇಲ್ಲ, ಮೇಲು ಇಲ್ಲ, ಕೀಳು ಇಲ್ಲ, ಎಲ್ಲ ಒಂದೇ ಜಾತಿ ಎಂದರು. ಭಾವಿ ಶಿಕ್ಷಕರಿಗೆ ಮೌಲ್ಯಗಳ ಬಗ್ಗೆ ಅರಿವನ್ನು ಮೂಡಿಸಿದರು. ಕುವೆಂಪು ಹಾಗೂ ಶರೀಫರ ಹಾಡುಗಳನ್ನು ಹಾಡಿ ಪ್ರಶಿಕ್ಷಣಾರ್ಥಿಗಳ ಮನವನ್ನು ಗೆದ್ದರು. ನಮ್ಮ ಜೀವನದಲ್ಲಿ ತಂದೆ ತಾಯಿಯರ ಅಗತ್ಯತೆ ಎಷ್ಟು ಮುಖ್ಯ ಎನ್ನುವ ಕಿವಿ ಮಾತುಗಳನ್ನು ಹೇಳಿದರು.

ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ನೀವು ಒಬ್ಬರಿಗೆ ಮಾದರಿಯಾಗಿರಬೇಕು. ನಿಮ್ಮ ಬಂಡವಾಳ ಮೌಲ್ಯವಾಗಬೇಕು. ಪ್ರತಿಭೆಯಲ್ಲಿ ಖ್ಯಾತಿಯನ್ನು ಪಡೆಯಬೇಕು. ಯಾವಾಗಲೂ ಖುಷಿಯಾಗಿ ಇರಬೇಕು ಎಂದರು.
ಪ್ರಾಂಶುಪಾಲ ಡಾ.ಮಹೇಶ ದಳಪತಿ ಇತರರಿದ್ದರು.