ಜಿಲ್ಲೆ

ದ್ರಾವಿಡ ಬ್ರಾಹ್ಮಣ ಪರಿಷತ್ ಮಹಾಸಭೆ

ಇಂದಿರಾ ಎನ್ ಕೆ

ಗಂಗೊಳ್ಳಿ: ದ್ರಾವಿಡ ಬ್ರಾಹ್ಮಣ ಪರಿಷತ್ ಗುಜ್ಜಾಡಿ ವಲಯದ ವಾರ್ಷಿಕ ಮಹಾಸಭೆ ತ್ರಾಸಿ ಗ್ರಾಮದ ಕವ್ಮಾರಕೊಡ್ಲುವಿನ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.

ಸಾಮೂಹಿಕ ವಿಷ್ಣುನಾಮ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಿಲ್ಲಾ ಮಹಿಳಾ ಸಂ ಕಾರ್ಯದರ್ಶಿ ಶಾಂತಾ ಗಣೇಶ್ ವಾತನಾಡಿದರು. ದ್ರಾವಿಡ ಬ್ರಾಹ್ಮಣ ಪರಿಷತ್‌ನ ತಾಲೂಕು ಅಧ್ಯಕ್ಷ ಕೃಷ್ಣಾನಂದ ಚಾತ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾದಿರಾಜ ಹೆಬ್ಬಾರ್, ತಾಲೂಕು ಮಹಿಳಾ ಅಧ್ಯಕ್ಷೆ ಭಾರ್ಗವಿ ಭಟ್, ಪುರೋಹಿತರಾದ ಗಣೇಶ್ ಐತಾಳ್, ವೆಂಕಟೇಶ್ ಮೂರ್ತಿ, ಗುಜ್ಜಾಡಿ ವಲಯ ಅಧ್ಯಕ್ಷ ವಿಶ್ವಂಭರ ಐತಾಳ್, ಉಪಾಧ್ಯಕ್ಷ ಸುರೇಂದ್ರ ನಾವಡ, ಕಾರ್ಯದರ್ಶಿ ಡಿ.ಎಂ.ಕಾರಂತ್, ಮಹಿಳಾ ಟಕದ ಸಂಧ್ಯಾ ಕಾರಂತ್ ಇತರರು ಉಪಸ್ಥಿತರಿದ್ದರು.

ಋಷಿ ಕೊಡಂಚ ಹಾಗೂ ಶ್ರೀಪತಿ ಭಟ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ಷೇತ್ರ ದೇವಸ್ಥಾನಗಳ ಅರ್ಚಕರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು. ಶ್ರುತಿ ಮಯ್ಯ ಕಾರ್ಯಕ್ರಮ ನಿರೂಪಿಸಿದರು.