ಆನೇಕಲ್: ಪಟ್ಟಣದ ಸಂತೆ ಬೀದಿಯ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿ ಕರಗ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕರಗೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ, ಚಿಕ್ಕಕೆರೆ ಆವರಣದ ಕಲ್ಯಾಣಿಯಲ್ಲಿ ಜಲಧಿ ಕರಗ ಸೇರಿದಂತೆ ವಿವಿಧ ಧಾರ್ಮಿಕಕೈಂಕರ್ಯಗಳನ್ನು ನೆರವೇರಿಸಿ, ದೇವಾಲಯದವರೆಗೂ ಮೆರವಣಿಗೆ ನಡೆಸಲಾಯಿತು. ನಾದಸ್ವರ, ಡೋಲು, ಗಂಟೆ, ಡಮರುಗ ಸದ್ದಿನೊಂದಿಗೆ ಜಲಧಿ ಕರಗ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು.
14ರವರೆಗೂ ಪೂಜೆ: ಊರಿನ ರಾಜಬೀದಿಗಳಲ್ಲಿ ದೇವರ ಉತ್ಸವ, ಏ.8ರಂದು ಅರ್ಜುನ ಸುಭದ್ರ ದೇವರ ಪ್ರಕಾರೋತ್ಸವ, ಏ.9ರಂದು ಮೆರವಣಿಗೆ, ಏ.10ರಂದು ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿ ಕಲ್ಯಾಣೋತ್ಸವ, ಏ.12ರಂದು ಹಸಿ ಕರಗ, ಏ.13ರಂದು ಬ್ರಹ್ಮರಥೋತ್ಸವ, ಏ.14ರಂದು ಕೋಟೆ ಜಗಳ, ಏ.15ರಂದು ಒಣ ಕರಗ ಮಹೋತ್ಸವ ನಡೆಯಲಿದೆ ಎಂದು ವಹ್ನಿಕುಲ ಸೇವಾ ಸಂದ ಸೋಮನಾಥ್ ತಿಳಿಸಿದರು.