ಜಿಲ್ಲೆ

ನಾಟಕ ಪ್ರದರ್ಶನ ನಾಳೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶಿವಕೃಪಾ ಕಲಾ ಸಂಘ ವತಿಯಿಂದ ಮಾ. 2ರಂದು ಸಂಜೆ 5.30ಕ್ಕೆ ಸೃಜನಾ ರಂಗ ಮಂದಿರದಲ್ಲಿ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಶಾಸಕ ಎನ್​.ಎಚ್​. ಕೋನರಡ್ಡಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಮಾಜಿ ಸಚಿವ ಬಿ.ಆರ್​ ಯಾವಗಲ್​, ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರ, ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್​.ಕೆ. ವಂಟಗೋಡಿ, ರೆಡ್ಡಿ ಬ್ಯಾಂಕ್​ ಅಧ್ಯಕ್ಷ ಕೆ.ಎಲ್​.ಪಾಟೀಲ, ಕೆ.ಎಚ್​. ಚೆನ್ನೂರು, ಆರ್​.ಎಂ. ದರಗದ, ಬಸವರಾಜ ಗುರಿಕಾರ, ಪಿ.ಎಚ್​.ನೀರಲಕೇರಿ ಆಗಮಿಸುವರು. ಪ್ರತಿಷ್ಠಾನದ ಅಧ್ಯ ಎಂ.ಎಸ್​. ಫರಾಸ ಅಧ್ಯಕ್ಷತೆ ವಹಿಸುವರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ತಿಳಿಸಿದ್ದಾರೆ.