ಜಿಲ್ಲೆ

ನಾಟಕ ಪ್ರದರ್ಶನ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಸಿದ್ದಲಿಂಗ ದೇಸಾಯಿ ದತ್ತಿ ನಿಮಿತ್ತ ಏ. 6ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಸಿದ್ದಲಿಂಗ ದೇಸಾಯಿ ಸಾಂಸ್ಕೃತಿಕ ಕಲಾ ಸಂಘದ ಉದ್ಘಾಟನೆ ಹಾಗೂ ಅಭಿಷೇಕ ದೇಸಾಯಿ ನಿರ್ದೇಶನದ ಹೇರಿಕೆ ನಾಟಕ ಪ್ರದರ್ಶನ ಏರ್ಪಡಿಸಿದೆ.

ಅತಿಥಿಗಳಾಗಿ ಮಾಜಿ ಸಂಸದ ಮಂಜುನಾಥ ಕುನ್ನೂರ, ನಿವೃತ್ತ ವಯಸ್ಕರ ಶಿಕ್ಷಣಾಧಿಕಾರಿ ಸೋಮಲಿಂಗಪ್ಪ ಉಳ್ಳಿಗೇರಿ, ನೀಲಕಂಠ ಅಸೂಟಿ, ಮಹಾದೇವ ಹೊರಟ್ಟಿ ಆಗಮಿಸುವರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.