ಮೈಸೂರು: ಸಂಚಲನ ಮೈಸೂರು ವತಿಯಿಂದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಚಲನ ಮಕ್ಕಳ ನಾಟಕೋತ್ಸವ ಅಂಗವಾಗಿ ಫೆ.16ರಂದು ಸಂಜೆ 6.30ಕ್ಕೆ ನಟ ಪುನೀತ್ ಅವರ ಕನಸಿನ ಕೂಸಾದ ಶಕ್ತಿಧಾಮ ವಿದ್ಯಾಶಾಲೆಯ ಮಕ್ಕಳಿಂದ ‘ಪುಷ್ಪರಾಣಿ’ ನಾಟಕ ಪ್ರದರ್ಶನ ನಡೆಯಲಿದೆ.
ಡಾ.ಚಂದ್ರಶೇಖರ ಕಂಬಾರ ರಚನೆಯ ಈ ನಾಟಕವನ್ನು ದೀಪಕ್ ಮೈಸೂರು ನಿರ್ದೇಶಿಸಿದ್ದಾರೆ. ಭಾವನಾ ಸಹ ನಿರ್ದೇಶನ ಜವಾಬ್ದಾರಿ ನಿರ್ವಹಿಸಿದ್ದಾರೆ.