ಜಿಲ್ಲೆ

ಬಾಯ್ಬಡ್ಕಿ, ಬಾಯ್​ ತುಂಬ ನಕ್ಬಿಡಿ ನಾಟಕ 27 ರಂದು

ಪವನ್ ಆಚಾರ್ಯ ನೀರ್ಚಾಲು

ಬೆಂಗಳೂರು: ಅಂತರಂಗ ಬಹಿರಂಗ ತಂಡದ ವತಿಯಿಂದ ಬಾಯ್ಬಡ್ಕಿ ಮತ್ತು ಬಾಯ್​ ತುಂಬ ನಕ್ಬಿಡಿ ಎಂಬ ಎರಡು ಸಾಂಸಾರಿಕ ನಗೆ ನಾಟಕಗಳನ್ನು ಪ್ರದರ್ಶಿಸುತ್ತಿದೆ. ಎನ್​.ಆರ್​.ಕಾಲನಿಯ ಡಾ.ಸಿ.ಅಶ್ವಥ್​ ಕಲಾಭವನದಲ್ಲಿ ಜು.27 ರಂದು ಸಂಜೆ 4ಕ್ಕೆ ಭೀಷ್ಮ ರಾಮಯ್ಯ ರಚಸಿ, ನಿರ್ದೇಶಿಸಿರುವ "ಬಾಯ್ಬಡ್ಕಿ' ನಾಟಕ, ಸಂಜೆ 7 ಕ್ಕೆ ನಾಗವೇಣಿ ರಂಗನ್​ ರಚನೆಯ, ವನಿತಾ ರಂಗಾಯಣ ನಿರ್ದೇಶಿಸಿರುವ "ಬಾಯ್​ ತುಂಬ ನಕ್ಬಿಡಿ' ನಾಟಕ ಪ್ರದರ್ಶನಗೊಳ್ಳಲಿದೆ.