ತೊರೆಚಾಕನಹಳ್ಳಿ ಗ್ರಾಮದಲ್ಲಿ ಮಾರಮ್ಮನ ಹಬ್ಬದ ಅಂಗವಾಗಿ ತೊರೆಚಾಕನಹಳ್ಳಿ ಶಂಕರೇಗೌಡ ವಿರಚಿತ ‘ಚಿಗುರಿದ ಕನಸು ಮತ್ತು ಗಂಡನಿದ್ದರೂ ಮುತೈದೆಯಲ್ಲ’ ಸಾಮಾಜಿಕ ನಾಟಕ ತಂಡಕ್ಕೆ ಸಮಾಜ ಸೇವಕಿ ಚೈತ್ರಾ ಶಶಿಧರ್ ಗೌಡ ಆರ್ಥಿಕ ನೆರವು ನೀಡಿದರು. 
ಜಿಲ್ಲೆ

ಕಲೆ, ಸಂಸ್ಕೃತಿ ಉಳಿವಿಗೆ ನಾಟಕ ಪೂರಕ

ಕೆ.ಎಂ.ದೊಡ್ಡಿ: ನಮ್ಮ ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾಟಕಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂಬು ನೀಡುತ್ತವೆ ಎಂದು ಸಮಾಜ ಸೇವಕಿ ಚೈತ್ರಾ ಶಶಿಧರ್‌ಗೌಡ ಹೇಳಿದರು.

ಸಮೀಪದ ತೊರೆಚಾಕನಹಳ್ಳಿ ಗ್ರಾಮದಲ್ಲಿ ಶ್ರೀ ಮಾರುತಿ ಗ್ರಾಮಾಭಿವೃದ್ಧಿ ಟ್ರಸ್ಟ್, ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘ ಹಾಗೂ ರಂಗಭೂಮಿ ಚಾರಿಟಬಲ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ಮಾರಮ್ಮನ ಹಬ್ಬದ ಅಂಗವಾಗಿ ತೊರೆಚಾಕನಹಳ್ಳಿ ಶಂಕರೇಗೌಡ ಅವರ ವಿರಚಿತ ‘ಚಿಗುರಿದ ಕನಸು ಮತ್ತು ಗಂಡನಿದ್ದರೂ ಮುತೈದೆಯಲ್ಲ’ಎಂಬ ಸುಂದರ ಸಾಮಾಜಿಕ ನಾಟಕಕ್ಕೆ ಆರ್ಥಿಕ ನೆರವು ನೀಡಿ ಮಾತನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆಗೆ ಸೀಮೀತವಾಗದೆ ನಮ್ಮ ಮನೋವಿಕಾಸಕ್ಕೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಉತ್ತಮ ಕಥೆಯಾದರಿತ ನಾಟಕಗಳನ್ನು ಅಭಿನಯಿಸಿ ಜನರಿಗೆ ವಾಸ್ತವ ಅರಿವು ಮೂಡಿಸುತ್ತಿರುವುದು ಶ್ಲ್ಲಾಘನೀಯ ಎಂದರು.

ನೈಜ ಕಲಾವಿದರೂ ಇರುವುದೇ ನಾಟಕಗಳಲ್ಲಿ. ಗುಬ್ಬಿ ವೀರಣ್ಣ ಕಂಪನಿಯಿಂದ ಬಂದ ಹಲವು ಕಲಾವಿದರು ಇಂದು ಚಿತ್ರರಂಗದಲ್ಲಿದ್ದಾರೆ. ಕಲೆ ಎಲ್ಲ್ಲರನ್ನೂ ಕೈ ಬೀಸಿ ಕರೆಯುತ್ತದೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎಂದರು.

ಪ್ರಸ್ತುತ ಹಳ್ಳಿಗಳಲ್ಲಿ ನಾಟಕ ಆಡುತ್ತಿದ್ದ ಕಲಾವಿದರೂ ಜೀ ಕನ್ನಡ ವೇದಿಕೆಯಲ್ಲಿ ನಮ್ಮನ್ನು ರಂಜಿಸುತ್ತಿದ್ದಾರೆ. ಇಂತಹ ಕಲಾವಿದರನ್ನು ಪ್ರೋತ್ಸಹಿಸುವ ಸಲುವಾಗಿ ನಿರಂತರವಾಗಿ ನಾಟಕಗಳಿಗೆ ನಮ್ಮ ಟ್ರಸ್ಟ್ ಸಹಾಯ ಮಾಡುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.

ಇದೆ ವೇಳೆ ಕಲಾವಿದ ಶಂಕರೇಗೌಡ ವಿರಚಿತ ಬಂಗಾರದ ಗುಡಿ ಮತ್ತು ದಾರಿ ತಪ್ಪಿದ ಮಗ ಎಂಬ ಸಾಮಾಜಿಕ ನಾಟಕ ಪುಸ್ತಕ ಬಿಡುಗಡೆ ಗೊಳಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಧರ್‌ಗೌಡ, ಸಂಘದ ತೊರೆಚಾಕನಹಳ್ಳಿ ಶಂಕರೇಗೌಡ, ಕನ್ನಡ ಜ್ಯೋತಿ ಯುವಕರ ಸಂಘದ ಮಾಜಿ ಅಧ್ಯಕ್ಷ ತೈಲೂರು ಸಿದ್ದರಾಜು, ಹಾಸ್ಯನಟರಾದ ಕ್ಯಾತಘಟ್ಟ ಅಭಿ, ರಶ್ಮಿ, ಮುಖಂಡರಾದ ಅಜ್ಜಹಳ್ಳಿ ಮನು, ತೊರೆಚಾಕನಹಳ್ಳಿ ಮಹೇಶ, ಕೋಡಹಳ್ಳಿ ಸತ್ಯಪ್ಪ, ಅಜ್ಜಹಳ್ಳಿ ವಿಕ್ಕಿ, ಕಿರಣ್, ಬಸವ, ರಾಜು, ರಾಕೇಶ್, ಮನು ಇತರರು ಇದ್ದರು.