ಜಿಲ್ಲೆ

ಸರ್ವ ಕಲೆಗಳ ಸಂಗಮವೇ ರಂಗಕಲೆ: ಧನುರಾಮ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ನಾಟಕಕಲೆಯ ಮೂಲ ಜನಪದ ಕಲೆ. ಮಾನವನ ನಿತ್ಯ ಬದುಕಿನಲ್ಲಾದ ಕ್ರಿಯೆಗಳನ್ನು ರಂಗದ ಮುಖಾಂತರ ಅಭಿವ್ಯಕ್ತಿಸುವ ಮಾಧ್ಯಮವಾಗಿದೆ ಎಂದು ಕರ್ನಾಟಕ ಜನಪದ ಪರಿಷತ್​ ವತಿಯಿಂದ ಜನಪದಗೌರವ ಸಮ್ಮಾನ ಪುರಸತ ಧನುರಾಮ ಲಮಾಣಿ ಹೇಳಿದರು.
ಬೆಟಗೇರಿಯ ನವರಸ ಕಲಾ ಸಂದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವರ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜನಪದ ಕಲೆ ನಾಟಕದ ಮೂಲಬೇರಾಗಿದೆ. ಐತಿಹಾಸಿಕ, ಸಾಮಾಜಿಕ, ನಾಟಕಗಳನ್ನು ನಮ್ಮ ಗ್ರಾಮೀಣ ಭಾಗದ ಆಸಕ್ತ ಕಲಾವಿದರು ಮನರಂಜನೆಗಾಗಿ ಮಾಡುವ ಕಲೆಯಾಗಿದೆ. ನಾಟಕ ಕಲೆ ಸಾಹಿತ್ಯ, ಸಂಗೀತ ನೃತ್ಯ, ಚಿತ್ರ ಶಿಲ್ಪ ಎಲ್ಲವನ್ನುಒಳಗೊಂಡಿರುವಂತದ ಕಲೆ ಆಗಿದ್ದರಿಂದ ರಂಗಕಲೆಯನ್ನು ಸರ್ವ ಕಲೆಗಳ ಸಂಗಮವೆಂದು ಕರೆಯುತ್ತಾರೆ ಎಂದರು.
ನಟನೆಯು ಎಲ್ಲರಿಗೂ ಒಲಿಯುವಂತದ್ದಲ್ಲ ಮತ್ತು ಅದಕ್ಕೆ ಪದವಿ ವಿದ್ಯಯ ಹಂಗಿಲ್ಲ. ಶಿಣ ಇಲ್ಲದವರು ಸಹ ನಟನೆಯಿಂದ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಧನುರಾಮ ಹೇಳಿದರು.
ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮತನಾಡಿ, ನಮ್ಮ ಲೋಕದ ಅಂಕು ಡೊಂಕನ್ನು ತಿದ್ದುವ ಮಾಧ್ಯಮ ರಂಗಕಲೆ. ಇದರಿಂದ ಮನರಂಜನೆ ಅಷ್ಟೇ ಅಲ್ಲದೇ ವ್ಯಕ್ತಿಯ ಸರ್ವಾಂಗೀಣ ವಿಕಾಸವಾಗುತ್ತದೆ. ಆದ್ದರಿಂದ ವಿದ್ಯಾಥಿರ್ಗಳು ರಂಗಭೂಮಿ ಮತ್ತು ಜನಪದಕಲೆಯನ್ನು ನಿರ್ಲಸಬೇಡಿ. ನುಮ್ಮನ್ನು ಪ್ರಬುದ್ದರನ್ನಾಗಿ ರೂಪಿಸುತ್ತದೆ ಎಂದು ಹಳೀದರು.
ನಿರ್ಮಲಾ ತರವಾಡೆ ಮಾತನಾಡಿ, ನಮ್ಮ ಸಂಸ್ಥೆಯು ಲಲಿತ ಕಲೆಗಳನ್ನು ಬೆಳೆಸಿ ಉಳಿಸುವಲ್ಲಿ ಶ್ರಮಿಮಿಸುತ್ತಿದೆ. ಮಕ್ಕಳಿಗೆ, ಯುವಕರಿಗೆ ತರಬೇತಿ ಶಿಬಿರವನ್ನು ಆಯೋಜಿಸಿ ಹಲವಾರು ವಿದ್ಯಾಥಿರ್ಗಳನ್ನು ರಂಗ ಕಲಾವಿದರನ್ನಾಗಿ ರೂಪಿಸಲಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಲಲತಕಲೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ತರಬೇತಿಯನ್ನು ನೀಡುವ ಆಸಕ್ತಿಯನ್ನು ಹೊಂದಿದ್ದೇವೆ. ಹಿರಿಯರ ಸಲಹೆ ಸಹಕಾರ ಅಗಯವಿದೆ ಎಂದರು.
ರಂಗ ನಿರ್ದೇಶಕ ಪ್ರೊ. ಬಸವರಾಜ ನೆಲಜೇರಿ, ಡಾ. ಗಣೇಶ ಸುಲ್ತಾನಪೂರ, ಚೈತನ್ಯ ಕುಲಕಣಿರ್, ಗಣೇಶ ಕಬಾಡಿ, ಮಂಜುನಾಥ ಗೌಡರ, ಭಾಗ್ಯಶ್ರೀ, ದೀಪಾ ಜಿತೂರಿ ಹಲವರು ಇದ್ದರು.