ಚಡಚಣ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಮುಖ್ಯ ಕಾಲುವೆ ನೀರು ಹರಿಸಲು ಆಗ್ರಹಿಸಿ ಎಸಿ ಅಬೀದ್​ ಗದ್ಯಾಳ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಗುರುನಾಥ ಬಗಲಿ, ಕಾಸುಗೌಡ ಕಾಮಗೊಂಡ, ಶಿವಶಂಕರಯ್ಯ ಅಷ್ಟಗಿ ಇತರರಿದ್ದರು. 
ಜಿಲ್ಲೆ

ಕೃಷ್ಣಾ ಮುಖ್ಯ ಕಾಲುವೆಯಿಂದ ನೀರು ಹರಿಸಿ

ಇಂಡಿ: ಚಡಚಣ ತಾಲೂಕಿನ ಹಾವಿನಾಳ, ಹತ್ತಳ್ಳಿ, ರೇವತಗಾಂವ, ನಿವರಗಿ, ಮಣಂಕಲಗಿ, ದಸೂರ, ಉಮರಜ ಸೇರಿ ಅನೇಕ ಗ್ರಾಮಗಳಿಗೆ ಕೃಷ್ಣಾ ಮುಖ್ಯ ಕಾಲುವೆಯಿಂದ ನೀರು ಹರಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್​ ಸಂದ ರೈತರು ಶುಕ್ರವಾರ ಮಿನಿ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿ ಕಂದಾಯ ಉಪವಿಬಾಗಾಧಿಕಾರಿ ಅಬೀದ್​ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.

ಗುಂದವಾನ ಗ್ರಾಮದ ಪ್ರಗತಿಪರ ರೈತರು ಮತ್ತು ಭಾರತೀಯ ಕಿಸಾನ್​ ಸಂದ ಗುರುನಾಥ ಬಗಲಿ ಮಾತನಾಡಿ, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಝಳಕಿಯ ಕೃಷ್ಣಾ ಮೇಲ್ದಂಡೆ ಕಚೇರಿ ಎದುರು ಸತ್ಯಾಗ್ರಹ ಮಾಡುತ್ತಿದ್ದೇವು. ಸ್ಥಳಕ್ಕೆ ಭೇಟಿ ನೀಡಿದ ಇಂಡಿಯ ತಹಸೀಲ್ದಾರ್​ ಮಂಜುಳಾ ನಾಯಕ ಮತ್ತು ಯುಕೆಪಿ ಅಧಿಕಾರಿಗಳು ಇಂಡಿಯ ಉಪವಿಭಾಗಾಧಿಕಾರಿಗಳಿಗೆ ಭೇಟಿಯಾಗಲು ಸೂಚಿಸಿದ್ದರು ಎಂದರು.

ಸದ್ಯ ಕೃಷ್ಣಾ ಮುಖ್ಯ ಕಾಲುವೆಗೆ 135 ಕಿ.ಮೀ.ವರೆಗೆ ಮಾತ್ರ ನೀರು ಬರುತ್ತದೆ. ಟೇಲ್​ ಎಂಡ್​ 173 ಕಿ.ಮೀ. ವರೆಗೆ ನೀರು ಹರಿಸಿ ಚಡಚಣ ಭಾಗದ ಹಾವಿನಾಳ ಹತ್ತಳ್ಳಿ ಸೇರಿ ಇನ್ನಿತರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಾವಿನಾಳದ ಕಾಸುಗೌಡ ಕಾಮಗೊಂಡ, ಏಳಗಿಯ ಶಿವಶಂಕರಯ್ಯ ಅಷ್ಟಗಿ, ಲೋಣಿ ಬಿಕೆ ಗ್ರಾ.ಪಂ ಅಧ್ಯ ಶಿವಶರಣ ಜತ್ತಿ, ಜಕ್ಕಪ್ಪ ಉಟಗಿ, ಶ್ರೀಶೈಲ ಮೇತ್ರಿ ಇತರರಿದ್ದರು.