ಜಿಲ್ಲೆ

ನಾಲೆಗಳಿಗೆ ನೀರು ಹರಿಸಿ

ಪ್ರಸಿನ್ ಕೆ.ಆರ್

ಬನ್ನೂರು: ನಾಲೆಗಳಿಗೆ ನೀರು ಹಾಯಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಸದಸ್ಯರು ಬನ್ನೂರು ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಹೆಚ್ಚಿನ ಬಿಸಿಲಿನಿಂದ ತೋಟದ ಬೆಳೆಗಳು ಒಣಗುತ್ತಿವೆ. ಕಷ್ಟಪಟ್ಟು ಬೆಳೆದ ಫಸಲು ಒಣಗಿ ನಾಶವಾಗುತ್ತಿದೆ. ನಾಲೆಗಳಿಗೆ ನೀರು ಹಾಯಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಸಂಘದ ಹೋಬಳಿ ಅಧ್ಯಕ್ಷ ಹುಚ್ಚೇಗೌಡ ಆಗ್ರಹಿಸಿದರು.

ಕಚೇರಿಗೆ ಯಾವಾಗ ಬಂದರೂ ಇಂಜಿನಿಯರ್‌ಗಳು ಸಿಗುವುದಿಲ್ಲ, ಸಿಬ್ಬಂದಿ ಉಡಾಫೆಯ ಉತ್ತರ ನೀಡುತ್ತಾರೆ. ಸಹಾಯಕ ಕಾರ್ಯಪಾಲಕ ಅಭಿಯಂತರರು ದರ್ಪದಿಂದ ವರ್ತಿಸುತ್ತಾರೆ. ರೈತರು ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ಪ್ರಶ್ನಿಸಿದರು.

ರೈತ ಮುಖಂಡ ಸೀಹಳ್ಳಿ ರವಿ, ಜಯರಾಮು, ವಿಜಯ್‌ಕುಮಾರ್, ಅರಸೇಗೌಡ, ರವಿ, ಮಹೇಶ್, ಅನಂತರಾಜು, ಚಾಮೇಗೌಡ, ಶಿವರಾಮು, ವಿಶ್ವಗೌಡ, ಪುಟ್ಟಸ್ವಾಮಿ, ನಾಗೇಂದ್ರ, ರಾಜೇಂದ್ರ, ಶಂಕರ್, ಮಹೇಶ್, ಕುಮಾರ್, ಜಯರಾಮು, ನಾಗೇಶ್, ಮಹದೇವಸ್ವಾಮಿ, ಕುಮಾರ ಇತರರು ಇದ್ದರು.