ಖಾನಾಪುರ: ತಾಲೂಕಿನ ಬೀಡಿ, ಪಾರಿಶ್ವಾಡ ಮತ್ತು ಮಂಗೇನಕೊಪ್ಪ ಗ್ರಾಮಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಸುರಂಗ ಮಾರ್ಗ ನಿರ್ಮಿಸಲಾಗಿದೆ ಎಂದು ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಎಂ.ಜಿ.ದೇವರಾಜ ಹೇಳಿದರು.
ತಾಲೂಕಿನ ಮಂಗೇನಕೊಪ್ಪ ಗ್ರಾಮದಲ್ಲಿ ಸುರಂಗ ಮಾರ್ಗ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಸುರಂಗ ಇರಿಸಿದ್ದು, ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ತಾಪಂ ಇಒ ಬಿ.ವಿ. ಅಡವಿಮಠ, ಬೀಡಿ ಗ್ರಾಪಂ ಅಧ್ಯಕ್ಷೆ ವಿದ್ಯಾ ಹಡಪದ, ಪಿಡಿಒ ಗಣೇಶ, ಪಾರಿಶ್ವಾಡ ಪಿಡಿಒ ಲೀಲಾವತಿ ಕರಲಿಂಗಣ್ಣವರ, ಮಂಗೇನಕೊಪ್ಪ ಪಿಡಿಒ ಬಾಲರಾಜ ಭಜಂತ್ರಿ ಇತರರು ಇದ್ದರು.
ತಲ್ಲೂರ ಸಮೀಪದ ಮಬನೂರ ಗ್ರಾಮದಲ್ಲಿ ಕರೊನಾ ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಯುವಕರು ಸ್ವಯಂ ಪ್ರೇರಿತರಾಗಿ ಸಾರ್ವಜನಿಕ ಸ್ಥಳಗಳು, ರಸ್ತೆ, ಚರಂಡಿ ಹಾಗೂ ದೇವಸ್ಥಾನ ಆವರಣದಲ್ಲಿ ಸೋಡಿಯಂ ಹೈಡ್ರೋಕ್ಲೋರೈಡ್ ದ್ರಾವಣ ಸಿಂಪಡಿಸಿದರು. ಸಮಾಜಸೇವಕ ಅಶೋಕ ಬಡಗೇರ, ಪಾಂಡುರಂಗ ಮೇಟಿ, ಮಹಾದೇವ ಮರಗೋಡ, ಯಲ್ಲಪ್ಪ ನರಿ, ಮಹಾದೇವ ನಾವಿ, ಶಿವಾನಂದ ನರಿ ಹಾಗೂ ಗ್ರಾಮಸ್ಥರು ಇದ್ದರು.