ಮುಧೋಳ: ಬಡವರ, ನಿರ್ಗತಿಕರ ನೆರಳಾಗಿ ಬದುಕಿ ಅಲ್ಪ ಸಮಯದಲ್ಲಿ ಅಗಲಿದ ಸುನೀಲ ಪೂಜಾರಿ ಜನಾನುರಾಗಿ ತಜ್ಞವೈದ್ಯರಾಗಿದ್ದರು ಎಂದು ಸಾಹಿತಿ ಡಾ. ಶಿವಾನಂದ ಕುಬಸದ ಹೇಳಿದರು.
ಸಮೃದ್ಧಿ ಗೆಳಯರ ಬಳಗ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಂತ ಚಿಕಿತ್ಸೆ ವೈದ್ಯರಾಗಿದ್ದ ಡಾ. ಸುನೀಲ ಎಸ್. ಪೂಜಾರಿ ಅವರ ಸ್ಮರಣಾರ್ಥ ನಗರದ ಬಿಲ್ ಮೆಮೋರಿಯಲ್ ಸ್ಕೂಲ್ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಮೋಹನ್ ಬಿರಾದಾರ ಹಾಗೂ ನ್ಯಾಯವಾದಿ ದಯಾನಂದ ಪಾಟೀಲ ಮಾತನಾಡಿ, ಬಡವರ ಆರೋಗ್ಯಕ್ಕಾಗಿ ತನು, ಮನ, ಧನ ಸಹಾಯ ಮಾಡಿ ಜನಾನುಮುಖಿಯಾದ ಡಾ. ಪೂಜಾರಿ ಅವರ ಸೇವೆ ಸ್ಮರಣೀಯ ಎಂದರು.
ವೈದ್ಯರ ಸಂಘದ ಅಧ್ಯಕ್ಷ. ಡಾ.ಕೆ.ಎಲ್. ಉದಪುಡಿ, ಟಿಎಚ್‌ಒ ಡಾ. ಅಶೋಕ ಸೂರ್ಯವಂಶಿ, ಡಾ. ಮೋಹನ್ ಬಿರಾದಾರ, ನ್ಯಾಯವಾದಿ ದಯಾನಂದ ಪಾಟೀಲ, ಡಾ. ಶ್ರೀಧರ ಪೂಜಾರಿ, ಮಲ್ಲಿಕಾರ್ಜುನ ಸವದಿ, ಅಭಿಷೇಕ ತಲಾಠಿ, ದರ್ಶನಾ ಬೋಹಿತೆ, ಕಿರಣ ಟಂಕಸಾಲಿ, ಮಹಾದೇವ ಶಿಂದೆ, ರಾಚಯ್ಯ ವಸ್ತ್ರದ, ಡಾ. ನಿರಂಜನ ಪರಮಶೆಟ್ಟಿ, ಡಾ. ಅರವಿಂದ ಪಟ್ಟಣಶೆಟ್ಟಿ ಇದ್ದರು.
ಇದೇ ಸಂದರ್ಭದಲ್ಲಿ ಹೃದಯಾಘಾತ ಕುರಿತು ಸ್ತಬ್ಧ ಚಿತ್ರ ಪ್ರದರ್ಶಿಸಲಾಯಿತು.
ಶಿಬಿರಕ್ಕೆ ತಜ್ಞ ವೈಜ್ಞರ ತಂಡದಿಂದ ಸೇವೆ : ಸ್ತ್ರೀರೋಗ ತಜ್ಞರಾದ ಡಾ.ಅನಿತಾ ನಾಯಿಕ, ಡಾ. ಚಿನ್ನಪ್ಪ ಕೊಕಟನೂರ, ಕಣ್ಣಿನ ತಜ್ಞರಾದ ಡಾ.ಎನ್.ಎಸ್. ಮುನವಳ್ಳಿ, ಡಾ. ಶರಣ ಹೊಸಪೇಟೆ, ಇಎನ್‌ಟಿ ತಜ್ಞರಾದ ಡಾ. ರಾಘವೇಂದ್ರ ನಾಲವತವಾಡ, ಗ್ಯಾಸ್ಟ್ರೋ ತಜ್ಣರಾದ ಡಾ. ಸವಿತಾ ಹೊಸೂರ, ಡಾ. ನಿತೇಶ ಗುರವ, ಅರ್ಥೋ ತಜ್ಞರಾಗಿ ಡಾ. ಸುನೀಲ ಮಲಘಾಣ, ಕಿರಣ ಹುನಸಿಕಟ್ಟಿ, ಹರದಯರೋಗ ತಜ್ಞರಾದ ಡಾ. ದರ್ಶನ ಬಿರಾದಾರ , ಡಾ. ಪ್ರಕಾಶ ಎಸ್., ಡಾ. ಕೆ.ಎಲ್. ಉದಪುಡಿ, ಡಾ. ಚಿನ್ಮಯ ನಾಯಿಕ, ಡಾ. ವಿಜಯ ತಮ್ಮನಗೌಡರ, ಡಾ.ವಿವೇಕ ತಿರ್ಲಾಪುರ, ಡಾ. ಸಚಿನ್ ಪೂಜಾರಿ, ಚಿಕ್ಕ ಮಕ್ಕಳ ತಜ್ಣರಾದ ಡಾ.ಶಖೀಲ ಮೋಮಿನ್, ಡಾ.ಪ್ರಬಯ್ಯ ಕಲಮಠ, ಶಸ್ತ್ರ ಚಿಕಿತ್ಸಕರಾದ ಡಾ. ಅನೂಪ ಕುಬಸದ ಸೇರಿ ಒಟ್ಟು ಹದಿನಾಲ್ಕು ವಿಭಾಗದಲ್ಲಿ 29 ನುರಿತ ತಜ್ಞ ವೈದ್ಯರು ಅಂದಾಜು 650ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಿದರು.
ಸ್ನೇಹಿತ ದಿ. ಡಾ. ಸುನೀಲ ಪೂಜಾರಿ ಸ್ಮರಣಾರ್ಥ ಅವರ ಸಹಪಾಠಿ ಸ್ನೇಹಿತರಾದ ಅಂದಾಜು ವಿವಿಧ ವಿಭಾಗದ 29 ತಜ್ಞವೆದ್ಯರು ಎರಡು ವಾರಗಳಿಂದ ನೂರಾರು ಬಡವರಿಗೆ ಸ್ವಂತ ಖರ್ಚಿನಲ್ಲೇ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಸಾಯಿ ನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷ ರಾಜೇಶ ವಾಲಿ, ಉದ್ಯಮಿ ಕಣ್ಣೀಶ ಸಾರವಾಡ, ಅಪ್ಪಣ್ಣ ರೂಗಿ, ಗಿರೀಶ ಮೋದಿ, ಸ್ಪೂನ್ನಿಲ್ ಶಹಾ, ರಾಚಣ್ಣ ವಸ್ತ್ರದ, ಮಲ್ಲಿಕಾರ್ಜುನ ಸವದಿ, ಕಿರಣ ಟಂಕಸಾಲಿ, ಅಭಿಷೇಕ್ ತಲಾಟಿ, ಸಂಗಪ್ಪ ದಡೇದ, ಗೋಪಾಲ ಕಂದಗಲ್, ಕುಮಾರ ಹಿರೇಮಠ, ಜಗದೀಶ ಇಂಡಿ, ಬಾಬಾಗೌಡ ಪಾಟೀಲ, ರಾಚಯ್ಯ ವಸ್ತ್ರದ, ಜಗದೀಶ ಇಂಡಿ ಸೇರಿ ಇವರ ತಂಡದ ಸೇವೆ ಅನನ್ಯವಾಗಿತ್ತು.