ಜಿಲ್ಲೆ

ಡಾ. ವಿಷ್ಣುವರ್ಧನ್ ಅವರ 14ನೇ ಪುಣ್ಯಸ್ಮರಣೆ

ಅವಿನಾಶ್ ಜೈನಹಳ್ಳಿ

ಮೈಸೂರು: ಡಾ. ವಿಷ್ಣುವರ್ಧನ್ ಅವರ 14ನೇ ಪುಣ್ಯಸ್ಮರಣೆ ಅಂಗವಾಗಿ ಜ.21 ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಗರದ ಹೊರ ವಲಯದಲ್ಲಿನ ಉದ್ಬೂರು ಬಳಿಯ ವಿಷ್ಣು ಸ್ಮಾರಕ ಭವನದಲ್ಲಿ ಸೌಭಾಗ್ಯ ಅಸೋಸಿಯೇಟ್ಸ್ ವತಿಯಿಂದ ಗೀತ ನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸೌಭಾಗ್ಯ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲೆಲ್ಲೂ ಸಂಗೀತವೇ ಎಂಬ ಶೀರ್ಷಿಕೆಯ ಕಾರ್ಯಕ್ರಮ ಇದಾಗಿದ್ದು, ರಾಜ್ಯದ ವಿವಿಧೆಡೆಯಿಂದ ಹವ್ಯಾಸಿ ಗಾಯಕ, ಗಾಯಕಿಯರು ಪಾಳ್ಗೊಂಡು ವಿಷ್ಣುವರ್ಧನ್ ಅಭಿನಯದ ಯುಗಳ ಗೀತೆಗಳನ್ನು ಹಾಡಲಿದ್ದಾರೆಂದರು.

ಎಂ.ಡಿ.ಪಾರ್ಥಸಾರಥಿ, ವರದರಾಜ್, ಬಸವರಾಜೇಂದ್ರ ಸ್ವಾಮಿ ಹಾಜರಿದ್ದರು.