ಡಾ. ವಿಷ್ಣುವರ್ಧನ್ 74ನೇ ಜನ್ಮದಿನ ನಿಮಿತ್ತ ಇಳಕಲ್ಲ ನಗರದ ನವಜೀವನ ವೃದ್ಧಾಶ್ರಮದ ನಿವಾಸಿಗಳಿಗೆ ವಿಎಸ್‌ಎಸ್ ಸಂಘಟನೆ ಇಳಕಲ್ಲ ಘಟಕದಿಂದ ಉಪಾಹಾರ, ಸಿಹಿ ಹಂಚಲಾಯಿತು. 
ಜಿಲ್ಲೆ

ಡಾ. ವಿಷ್ಣುವರ್ಧನ್ ಮೇರು ವ್ಯಕ್ತಿತ್ವದ ದೈತ್ಯ ಪ್ರತಿಭೆ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ: ಕನ್ನಡ ಚಲನಚಿತ್ರ ರಂಗದ ರಾಮಾಚಾರಿ ಖ್ಯಾತಿಯ ಡಾ. ವಿಷ್ಣುವರ್ಧನ್ ಮೇರು ವ್ಯಕ್ತಿತ್ವದ ದೈತ್ಯ ಪ್ರತಿಭೆ ಎಂದು ಇಳಕಲ್‌ನ ವಿಎಸ್‌ಎಸ್ ಸಂಘದ ಬಾಗಲಕೋಟೆ ಜಿಲ್ಲಾಧ್ಯಕ್ಷ ಚಂದ್ರು ಅಪ್ಪಾಜಿ ಹೇಳಿದರು.

ನಗರದ ಶ್ರೀನಿವಾಸ ಚಿತ್ರಮಂದಿರ ಬಳಿ ಇರುವ ಇಳಕಲ್‌ನ ವಿಎಸ್‌ಎಸ್ ಸಂಘಟನೆ ಹಾಗೂ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಇತ್ತೀಚೆಗೆ ವಿಷ್ಣುವರ್ಧನ್ ಅವರ 74ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿಷ್ಣು ದಾದಾ ಅವರಲ್ಲಿದ್ದ ಸಾಮಾಜಿಕ ಅಂತಃಕರಣದಿಂದಲೇ ಇಂದಿಗೂ ಅವರು ಜನಮಾನಸದಲ್ಲಿ ಶಾಶ್ವತ ಸ್ಥಾನಪಡೆದುಕೊಂಡಿದ್ದಾರೆ ಎಂದು ಹೇಳಿದರು.

ನಗರದ ಆಶಾದೀಪ ಅಂಗವಿಕಲರ ಸಂಸ್ಥೆ, ನವಜೀವನ ವೃದ್ದಾಶ್ರಮದಲ್ಲಿ ಆಶ್ರಮ ನಿವಾಸಿಗಳಿಗೆ ಉಪಾಹಾರ ನೀಡಿ ಹಾಗೂ ಅಭಿಮಾನಿಗಳು ಸಿಹಿ ಹಂಚಲಾಯಿತು.

ಸಂಘಟನೆ ಸದಸ್ಯರಾದ ಪೃಥ್ವಿರಾಜ್ ಹಿರೇಮಠ, ನಾಗರಾಜ್ ಕೊಡಗಲಿ, ಈರಣ್ಣ ಮನ್ನಾಪುರ್, ಸುರೇಶ್ ರಾಠೋಡ್, ರಾಹುಲ್ ಸರೋದೆ, ಸುರೇಶ್ ಹಡಪದ, ವಿನಾಯಕ ಪೂಜಾರಿ, ಶಿವಲೀಲಾ ಮುದಗಲ್, ದೇವಮ್ಮ ಹಾಗೂ ವಿಷ್ಟು ಅಭಿಮಾನಿಗಳು ಇದ್ದರು.