ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿರುವ ವಿಷ್ಣು ಫ್ರೂ ಟ್ಸ್ ಸ್ಟಾಲ್‌ನಲ್ಲಿ ಅಭಿಮಾನಿಗಳು ಗುರುವಾರ ಸಾಹಸ ಸಿಂಹ ದಿ.ಡಾ. ವಿಷ್ಣುವರ್ಧನ್ ರವರ 74ನೇ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಸಿದ್ದರಾಜು, ಸಿಂಹ ಮಹದೇವ, ವಿಷ್ಣು, ಟೋನಿ ಶ್ರೀನಿ ವಾಸ್,ವಿಶ್ವನಾಥ್, ಸಾಮಾಟ್ರ ಮಂಜಣ್ಣ, ಸುರೇಶ್ ಇತರರು ಇದ್ದಾರೆ. 
ಜಿಲ್ಲೆ

ಡಾ.ವಿಷ್ಣುವರ್ಧನ್ ಜನ್ಮದಿನ ಆಚರಣೆ

ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿರುವ ವಿಷ್ಣು ಫ್ರೂಟ್ಸ್ ಸ್ಟಾಲ್‌ನಲ್ಲಿ ಅಭಿಮಾನಿಗಳು ಬುಧವಾರ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 74ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.

ಈ ವೇಳೆ ವಿಷ್ಣು ಟೀ ಸ್ಟಾಲ್ ಮಾಲೀಕ ಸಿದ್ದರಾಜು ಮಾತನಾಡಿ, ನಮ್ಮ ನೆಚ್ಚಿನ ನಾಯಕರಾದ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಗುತ್ತಿದೆ. ಸಾರ್ವಜನಿಕರಿಗೆ ಸಿಹಿ ಹಂಚಲಾಗಿದೆ. ವಿಷ್ಣುವರ್ಧನ್ ನಮ್ಮ ಜೊತೆ ಇಲ್ಲದಿದ್ದರೂ ಅವರು ಮಾಡಿರುವ ಕಾರ್ಯಗಳು ಹಾಗೂ ಅವರು ನಟಿಸಿರುವ ಚಲನಚಿತ್ರಗಳು ಇಂದಿಗೂ ಜೀವಂತವಾಗಿವೆ ಎಂದು ತಿಳಿಸಿದರು.
ಡಾ.ವಿಷ್ಣುವರ್ದನ್ ಅಭಿಮಾನಿ ಬಳಗದ ವಿಷ್ಣು ಫ್ರೂಟ್ಸ್ ಸ್ಟಾಲ್‌ನ ಸಿಂಹ ಮಹದೇವ, ವಿಷ್ಣು, ಟೋನಿ ಶ್ರೀನಿವಾಸ್, ವಿಶ್ವನಾಥ್, ಸಾಮ್ರಾಟ್ ಮಂಜಣ್ಣ, ಸುರೇಶ್, ಮಂಜು, ಶ್ರೀಧರ್, ಮಾದೇವ, ಗೋವಿಂದ, ದೇವನಾಯಕ, ಗುರುರಾಜು ಬೆಂಗಳೂರು, ನಿಶಾಂತ್ ನಾಯಕ, ಸ್ವಾಮಿ, ರಾಜಣ್ಣ, ಶಿವಣ್ಣ, ನಾಗರಾಜು ಸಾಮ್ರಾಟ್ ಮತ್ತಿತರಿದ್ದರು.