ಮಡಿಕೇರಿ: ಕೊಡಗು ಜಿಲ್ಲಾ ವಿಷ್ಣು ಸೇನಾ ಸಮಿತಿ ವತಿಯಿಂದ ಕನ್ನಡದ ಹಿರಿಯ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ೭೪ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಎಂ.ಎಚ್.ರಫೀಕ್ ದಾದ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿ ಸಂಭ್ರಮಿಸಿದರು. ಖ್ಯಾತ ಜೂನಿಯರ್ ವಿಷ್ಣುವರ್ಧನ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಾರ್ವಜನಿಕರನ್ನು ರಂಜಿಸಿದರು.
ಹಿರಿಯ ಪತ್ರಕರ್ತ ಎಂ.ಪಿ.ಕೃಷ್ಣರಾಜ್ ಮಾತನಾಡಿ, ವಿಷ್ಣು ಸೇನಾ ಸಮಿತಿಯ ವತಿಯಿಂದ ಹಲವು ಜನಪರ ಕೆಲಸ ಕಾರ್ಯಗಳು ಮಾಡುತ್ತಾ ಬರಲಾಗಿದೆ. ಮುಂದೆಯೂ ಉತ್ತಮ ಕಾರ್ಯಕ್ರಮ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.
ಕೊಡಗು ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರವಿಗೌಡ ಮಾತನಾಡಿ, ಎಲ್ಲರೂ ಸೇರಿ ಒಂದು ಸಂಘವನ್ನು ಕಟ್ಟಬಹುದು. ಆದರೆ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಬಹಳ ಕಷ್ಟ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಮುನೀರ್ ಮಾಚರ್ ಹಾಗೂ ಸಮಾಜ ಸೇವಕ ಸುಕುಮಾರ್, ವಿಕ್ರಂ ಡೆಕೊರೇಟರ್ ಮಾಲೀಕ ಪಿ.ಜಿ.ಕಮಲ್, ಅಂಬೇಡ್ಕರ್ ಭವನದ ಪದಾಧಿಕಾರಿಗಳು, ಪ್ರಮುಖರಾದ ಶೇಖರ್, ವಿಷ್ಣುಸೇನಾ ಸಮಿತಿಯ ಖಜಾಂಚಿ ಪಿ.ಐ.ಅನ್ಸಾರ್ ಮತ್ತು ಸಹ ಕಾರ್ಯದರ್ಶಿ ಪ್ರವೀಣ್ ಲೋಬೊ, ಸದಸ್ಯರಾದ ರಮೇಶ್ ರೈ, ಟೆಂಪೆೀ ಉಮೇಶ್, ವಿವಿಧೆಡೆಯಿಂದ ವಿಷ್ಣು ಅಭಿಮಾನಿಗಳು ಪಾಲ್ಗೊಂಡಿದ್ದರು.
ಮಮತಾ ಆರ್ಯ ಪ್ರಾರ್ಥಿಸಿದರು. ದೀಪಿಕಾ ಸಂದೀಪ್ ನಿರೂಪಿಸಿದರು. ವಿಷ್ಣುಪ್ರಿಯ ನಾಗರಾಜ್ ಸ್ವಾಗತಿಸಿದರು. ಪುಟಾಣಿಗಳಾದ ಸಾನ್ವಿ ಹಾಗೂ ಪ್ರೀತಿ ನೃತ್ಯ ಪ್ರದರ್ಶನ, ಮಂಗಳೂರಿನ ಗೊಂಬೆ ಕುಣಿತ, ಎಲ್ಲರ ಗಮನ ಸೆಳೆಯಿತು. ವಿಷ್ಣು ಅಭಿಮಾನಿ ಆರಾಧನಾ ಗಿರೀಶ್ ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಚಿತ್ರದ ಗೀತೆಗಳನ್ನು ಹಾಡಿ ರಂಚಿಸಿದರು. ಫೈವ್ ಸ್ಟಾರ್ ಸಿಂಗರ್ಸ್ ಭಾಷಾ ಮತ್ತು ತಂಡದ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.