ದೇವದುರ್ಗದಲ್ಲಿ ನಟ ಡಾ.ವಿಷ್ಣುವರ್ಧನ್ ಜನ್ಮದಿನ ಆಚರಿಸಲಾಯಿತು. ಪ್ರಮುಖರಾದ ರಾಮಣ್ಣ ನಾಯಕ ಡಿ.ಕರಡಿಗುಡ್ಡ, ಅಯ್ಯಣ್ಣ ಕಟ್ಟಿಮನಿ, ಹನುಮಯ್ಯ, ಕೆಂಪೇಗೌಡ, ಶಾಮ್‌ಸುಂದರ, ರಫೀ, ಅಂಬರೀಷ್, ನಾಗರಾಜ್ ಮಜ್ಜಿಗೆ ಇತರರಿದ್ದರು. 
ಜಿಲ್ಲೆ

ನಾಡು ನುಡಿಗೆ ಡಾ.ವಿಷ್ಣು ಅಪಾರ ಕೊಡುಗೆ

ದೇವದುರ್ಗ: ಸಾಹಸಸಿಂಹ ಡಾ.ವಿಷ್ಣುವರ್ಧನ್ ಸಿನಿಮಾ ನಟನೆ ಜತೆ ಕನ್ನಡ ನಾಡು ನುಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಷ್ಣು ಸೇನಾ ಸಮಿತಿ ಗೌರವಾಧ್ಯಕ್ಷ ರಾಮಣ್ಣ ನಾಯಕ ಡಿ.ಕರಡಿಗುಡ್ಡ ಹೇಳಿದರು.

ಪಟ್ಟಣದ ಶಾಂತಿನಗರದ ಡಾ.ವಿಷ್ಣುವರ್ಧನ್ ಸರ್ಕಲ್‌ನಲ್ಲಿ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗ, ವಿಷ್ಣು ಸೇನಾ ಸಮಿತಿ ಹಾಗೂ ಆಟೋ ಚಾಲಕರ ಸಂಘದಿಂದ ಏರ್ಪಡಿಸಿದ್ದ ನಟ ಡಾ.ವಿಷ್ಣುವರ್ಧನ್ ಅವರ 75ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ನೆಲ, ಜಲದ ವಿಷಯ ಬಂದಾಗ ಸದಾ ಕನ್ನಡಿಗರಿಗೆ ಧ್ವನಿಯಾಗುತ್ತಿದ್ದರು. ಹಲವು ಸಮಾಜಮುಖಿ ಸಿನಿಮಾ ನೀಡಿ ಉತ್ತಮ ಸಂದೇಶ ಕೊಟ್ಟಿದ್ದಾರೆ. ಅವರಿಗೆ ರಾಜ್ಯ ಸರ್ಕಾರ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು.

ವಿಷ್ಣುವರ್ಧನ್ ಭಾವಚಿತ್ರಕ್ಕೆ ತಾಲೂಕು ಅಧ್ಯಕ್ಷ ಅಯ್ಯಣ್ಣ ಕಟ್ಟಿಮನಿ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಅಭಿಮಾನಿಗಳಾದ ಹನುಮಯ್ಯ, ಕೆಂಪೇಗೌಡ, ಶಾಮ್‌ಸುಂದರ, ಆಟೋ ಚಾಲಕರ ಸಂಘದ ತಾಲೂಕು ಅಧ್ಯಕ್ಷ ರಫೀ, ಅಂಬರೀಷ್, ನಾಗರಾಜ್ ಮಜ್ಜಿಗೆ, ದೇವರಾಜ್, ಮಲ್ಲಯ್ಯ ಹನುಮಯ್ಯ ನಾಡದಾಳ್, ರಾಜು, ರಾಘವೇಂದ್ರ, ತಿರುಪತಿ, ರಂಗಪ್ಪ ಬಲಿದವ್ ಕೋತಿಗುಡ್ಡ, ಬಸವರಾಜ್ ಹೋಟೆಲ್, ಆಕಾಶ್ ಇದ್ದರು.